ದೆಹಲಿ(ಏ.28): ಹ್ಯಾಟ್ರಿಕ್ ಗೆಲುವು ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಡೆಲ್ಲಿ ಕ್ಯಾಪಿಟಲ್ಸ್ ಹೋರಾಟಕ್ಕೆ ಸಜ್ಜಾಗಿದೆ. ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಹೆದ್ದ ಡೆಲ್ಲಿ ಬ್ಯಾಟಿಂಗ್ಆಯ್ಕೆ ಮಾಡಿಕೊಂಡಿದೆ.RCB ತಂಡದಲ್ಲಿ 3 ಬದಲಾವಣ ಮಾಡಲಾಗಿದೆ. ಮೊಯಿನ್ ಆಲಿ ಬದಲು ಹೆನ್ರಿಚ್ ಕ್ಲೆಸೆನ್ ತಂಡ ಸೇರಿಕೊಂಡಿದ್ದಾರೆ. ಇನ್ನು ಟಿಮ್ ಸೌಥಿ ಬದಲು ಶಿವಂ ದುಬೆ ಹಾಗೂ ಅಕ್ಷದೀಪ್ ನಾಥ್ ಬದಲು ಗುರುಕೀರತ್ ಸಿಂಗ್ ತಂಡ ಸೇರಿಕೊಂಡಿದ್ದಾರೆ,.

ಇದನ್ನೂ ಓದಿ: ಸನ್’ರೈಸರ್ಸ್’ಗೆ ಶಾಕ್ ಕೊಟ್ಟ ರಾಜಸ್ಥಾನ ರಾಯಲ್ಸ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 11 ಪಂದ್ಯಗಳಲ್ಲಿ 4 ಗೆಲುವು 7 ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. RCB ಆಡಿದ ಅಂತಿಮ 5 ಪಂದ್ಯದಲ್ಲಿ 4ರಲ್ಲಿ ಗೆಲುವು ಕಂಡಿದೆ. ಹೀಗಾಗಿ ದೆಹಲಿ ವಿರುದ್ಧವೂ ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ 11ರಲ್ಲಿ 7 ಗೆಲುವು ಸಾಧಿಸೋ ಮೂಲಕ 14 ಅಂಕ ಸಂಪಾದಿಸಿದೆ. ಈ ಮೂಲಕ 3ನೇ ಸ್ಥಾನದಲ್ಲಿದೆ.