Asianet Suvarna News Asianet Suvarna News

ಒಂದೂ ಎಸೆತ ಹಾಕದೇ IPL ಫೈನಲ್ ಫಲಿತಾಂಶ ಗೆಸ್ ಮಾಡಬಹುದು..!

ಲೀಗ್ ಹಂತದಲ್ಲಿ ಚೆನ್ನೈ ಹಾಗು ಮುಂಬೈ ತಂಡಗಳು ತಲಾ 9 ಗೆಲುವು ಹಾಗೂ 5 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದವು. ಇದೀಗ ಈ ಎರಡು ತಂಡಗಳು ಫೈನಲ್’ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ಫಲಿತಾಂಶ ಟಾಸ್ ಮೂಲಕ ಗೆಸ್ ಮಾಡಬಹುದಾಗಿದೆ. ಹೇಗೆ ಅಂತ ನೀವೇ ನೋಡಿ...

IPL 12 CSK vs MI toss will decide who will win IPL Title
Author
Hyderabad, First Published May 12, 2019, 5:55 PM IST

ಹೈದರಾಬಾದ್[ಮೇ.12]: ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಯಾರು ಎನ್ನುವ ಕುತೂಹಲಕ್ಕೆ ಭಾನುವಾರವಾದ ಇಂದು ತೆರೆಬೀಳಲಿದೆ. ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ತಲಾ ಮೂರು ಬಾರಿ ಐಪಿಎಲ್ ಚಾಂಪಿಯನ್ನರಾದ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಟೂರ್ನಿ ಆರಂಭಕ್ಕೂ ಮುನ್ನ ಕಪ್ ಗೆಲ್ಲುವ ನೆಚ್ಚಿನ ತಂಡಗಳೆಂದು ಗುರುತಿಸಿಕೊಂಡಿದ್ದ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿವೆ. ಈಗಾಗಲೇ ಲೀಗ್ ಹಂತದಲ್ಲಿ ಉಭಯ ತಂಡಗಳು ತಲಾ 9 ಗೆಲುವು ಹಾಗೂ 5 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದವು. ಲೀಗ್ ಹಂತದಲ್ಲಿ ಮುಂಬೈ ಪಡೆ ಎದರು ಎರಡು ಬಾರಿ ಧೋನಿ ಪಡೆ ಶರಣಾಗಿತ್ತು. ಆ ಬಳಿಕ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮತ್ತೊಮ್ಮೆ ಸೋಲು ಕಾಣುವ ಮೂಲಕ ಚೆನ್ನೈ ತಂಡವು ಮುಂಬೈ ಎದುರು ಹ್ಯಾಟ್ರಿಕ್ ಸೋಲು ಕಂಡಿತ್ತು.   

CSK Vs MI ಫೈನಲ್ ಫೈಟ್- ಯುವಿಗೆ ಸಿಗುತ್ತಾ ಚಾನ್ಸ್?

ಇಂದು ನಡೆಯಲಿರುವ ಪಂದ್ಯದಲ್ಲಿ ಒಂದೂ ಎಸೆತ ಹಾಕದೇ ಪಂದ್ಯದ ಫಲಿತಾಂಶವನ್ನು ಊಹಿಸಿಕೊಳ್ಳಬಹುದು. ಟಾಸ್ ಬಳಿಕ ಪಂದ್ಯದಲ್ಲಿ ಯಾರ ಕೈ ಮೇಲಾಗಬಹುದು ಎಂದು ತೀರ್ಮಾನಿಸಬಹುದಾಗಿದೆ. ಹೌದು, ಇದುವರೆಗೂ 11 ಐಪಿಎಲ್ ಫೈನಲ್ ಪಂದ್ಯಗಳಲ್ಲಿ 8 ಬಾರಿ ಟಾಸ್ ಗೆದ್ದ ತಂಡ ಜಯಭೇರಿ ಬಾರಿಸಿದ್ದರೆ, ಕೇವಲ 3 ಬಾರಿ ಮಾತ್ರ ಟಾಸ್ ಸೋತ ತಂಡ ಗೆಲುವಿನ ನಗೆ ಬೀರಿದೆ. ಇನ್ನೂ ಕುತೂಹಲದ ಸಂಗತಿ ಎಂದರೆ, 2012, 2014 ಹಾಗೂ 2018ನ್ನು ಹೊರತುಪಡಿಸಿ ಉಳಿದೆಲ್ಲಾ ಐಪಿಎಲ್ ಫೈನಲ್’ಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಜಯಭೇರಿ ಬಾರಿಸಿದೆ.

ಹೀಗಿತ್ತು ನೋಡಿ ಮುಂಬೈ ಇಂಡಿಯನ್ಸ್ ತಂಡದ ಫೈನಲ್ ದಾರಿ

ಟಾಸ್ ಗೆಲುವಿನಲ್ಲಿ ಧೋನಿ ಮುಂದೆ: ಪ್ರಸಕ್ತ ಆವೃತ್ತಿಯ ಐಪಿಎಲ್’ನಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆಲುವಿನ ವಿಚಾರದಲ್ಲಿ ಲಕ್ಕಿ ಕ್ಯಾಪ್ಟನ್ ಎನ್ನೋದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಚೆನ್ನೈ ಸೂಪರ್’ಕಿಂಗ್ಸ್ ತಂಡ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 10ರಲ್ಲಿ ಟಾಸ್ ಗೆದ್ದಿತ್ತು.[ಧೋನಿ 2 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದರು]. ಆ ಬಳಿಕ 2 ಕ್ವಾಲಿಫೈಯರ್ ಪಂದ್ಯಗಳಲ್ಲೂ ಧೋನಿ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇಂದಿನ ಪಂದ್ಯದಲ್ಲಿ ಧೋನಿ ಟಾಸ್ ಗೆದ್ದರೆ, ನಾಲ್ಕನೇ ಕಪ್ ಜಯಿಸುತ್ತಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ. 

ಹೀಗಿತ್ತು ನೋಡಿ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಫೈನಲ್ ದಾರಿ

IPL ಫೈನಲ್ ಟಾಸ್ ಗೆದ್ದವರು, ಕಪ್ ಗೆದ್ದವರ ಪಟ್ಟಿ ಇಲ್ಲಿದೆ ನೋಡಿ...

ಆವೃತ್ತಿ    ಪಂದ್ಯ        ಟಾಸ್    ಚಾಂಪಿಯನ್
2008    RRvsCSK    RR    ರಾಜಸ್ಥಾನ ರಾಯಲ್ಸ್
2009    DCvsRCB    RCB    ಡೆಕ್ಕನ್ ಚಾರ್ಜರ್ಸ್
2010    CSKvsMI        CSK    ಚೆನ್ನೈ ಸೂಪರ್’ಕಿಂಗ್ಸ್ 
2011    CSKvsRCB    CSK    ಚೆನ್ನೈ ಸೂಪರ್’ಕಿಂಗ್ಸ್ 
2012    CSKvsKKR    CSK    ಕೋಲ್ಕತಾ ನೈಟ್’ರೈಡರ್ಸ್
2013    CSKvsMI        MI    ಮುಂಬೈ ಇಂಡಿಯನ್ಸ್
2014    KKRvsKXIP    KKR    ಕೋಲ್ಕತಾ ನೈಟ್’ರೈಡರ್ಸ್
2015    CSKvsMI        CSK    ಮುಂಬೈ ಇಂಡಿಯನ್ಸ್
2016    SRHvsRCB    SRH    ಸನ್’ರೈಸರ್ಸ್ ಹೈದರಾಬಾದ್
2017    MIvsRPS        MI    ಮುಂಬೈ ಇಂಡಿಯನ್ಸ್
2018    CSKvsSRH    CSK    ಚೆನ್ನೈ ಸೂಪರ್’ಕಿಂಗ್ಸ್
2019    CSKvsMI        ?           ?

Follow Us:
Download App:
  • android
  • ios