ಪ್ರತಿಭಟನೆಯಲ್ಲಿ ತೊಡಗಿದ್ದ 6 ಕುಸ್ತಿಪಟುಗಳಿಗೆ ಸ್ಪೆಷಲ್ ಎಂಟ್ರಿ?
ಆಯ್ಕೆ ಟ್ರಯಲ್ಸ್‌ಗೆ ಗೈರಾಗಲು ತಾತ್ಕಾಲಿಕ ಸಮಿತಿಯಿಂದ ಅನುಮತಿ
ಪ್ರಾಥಮಿಕ ಆಯ್ಕೆ ಟ್ರಯಲ್ಸ್‌ನಿಂದ ವಿನಾಯಿತಿ ಪಡೆದ 6 ಕುಸ್ತಿಪಟುಗಳು
ಟ್ರಯಲ್ಸಲ್ಲಿ ಗೆದ್ದವರ ವಿರುದ್ಧ ಗೆದ್ದರೆ ಏಷ್ಯಾಡ್, ವಿಶ್ವ ಕೂಟಕ್ಕೆ ಅರ್ಹತೆ
ನವದೆಹಲಿ(ಜೂ.23): ಭಾರತೀಯ ಕುಸ್ತಿ ಫೆಡರೇಶನ್ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಒಂದೂವರೆ ತಿಂಗಳು ಪ್ರತಿಭಟನೆ ನಡೆಸಿದ 6 ಕುಸ್ತಿಪಟುಗಳಿಗೆ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ನೇಮಿತ ತಾತ್ಕಾಲಿಕ ಆಡಳಿತ ಸಮಿತಿಯು ವಿಶೇಷ ಸವಲತ್ತು ನೀಡಿದೆ. ವಿನೇಶ್ ಫೋಗಟ್, ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ಸಂಗೀತಾ ಫೋಗಟ್, ಸತ್ಯವರ್ತ್ ಕಡಿಯಾನ್ ಹಾಗೂ ಜಿತೇಂದರ್ ಕಿನ್ಹಗೆ ಕೇವಲ ಪ್ರಾಥಮಿಕ ಆಯ್ಕೆ ಟ್ರಯಲ್ಸ್‌ನಿಂದ ವಿನಾಯಿತಿ ಮಾತ್ರವಲ್ಲದೇ, ಟ್ರಯಲ್ಸ್‌ನಲ್ಲಿ ಗೆದ್ದವರ ವಿರುದ್ಧ ಆ.5ರಿಂದ 15ರ ನಡುವೆ ಸ್ಪರ್ಧೆ ನಡೆಸುವುದಾಗಿ ಭರವಸೆ ನೀಡಲಾಗಿದೆ.
ಈ ಆರು ಮಂದಿ ಕೇವಲ ಒಂದು ಪಂದ್ಯ ಗೆದ್ದರೆ ಸಾಕು ಏಷ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ಗೆ ಪ್ರವೇಶ ಸಿಗಲಿದೆ. ಏಷ್ಯಾಡ್‌ಗೆ ಹೆಸರು ಸಲ್ಲಿಸಲು ಜು.15 ಕೊನೆ ದಿನವಾಗಿದ್ದು, ಆ ಬಳಿಕ ಹೆಸರು ಬದಲಿಸಲು ಅವಕಾಶವಿದೆ. ಆಯ್ಕೆ ಟ್ರಯಲ್ಸ್‌ನಲ್ಲಿ ಗೆಲ್ಲುವ ಕುಸ್ತಿಪಟುಗಳು ಆರಂಭದಲ್ಲಿ ಏಷ್ಯಾಡ್‌ಗೆ ಆಯ್ಕೆಯಾದರೂ, ಈ 6 ಕುಸ್ತಿಪಟುಗಳ ವಿರುದ್ಧ ಸೋತರೆ ಅವಕಾಶ ವಂಚಿತರಾಗಲಿದ್ದಾರೆ.
ಹಲವರಿಂದ ಟೀಕೆ, ವಿರೋಧ!
ತಾತ್ಕಾಲಿಕ ಸಮಿತಿಯ ನಿರ್ಧಾರವನ್ನು ಹಲವು ಕುಸ್ತಿಪಟುಗಳು, ಕೋಚ್‌ಗಳು ಪಕ್ಷಪಾತವೆಂದು ಕರೆದಿದ್ದಾರೆ. ‘ಪ್ರತಿಭಟನೆಯು ಭಾರತೀಯ ಕುಸ್ತಿಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ನಡೆಯುತ್ತಿದೆ ಎಂದುಕೊಂಡಿದ್ದೆವು. ಆದರೆ ಮತ್ತದೇ ಬೆಳವಣಿಗೆಗಳು ನಡೆಯುತ್ತಿರುವುದನ್ನು ನೋಡಿ ಏನು ಹೇಳಬೇಕೋ ತಿಳಿಯುತ್ತಿಲ್ಲ’ ಎಂದು ಕುಸ್ತಿಪಟುವೊಬ್ಬರ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.
WFI Elections ಮತ್ತೆ ಮುಂದೂಡಿಕೆ; ಜುಲೈ 11ಕ್ಕೆ ಮರು ನಿಗದಿ
ಇನ್ನು ಐಒಎ ವಜಾಗೊಳಿಸುವ ವರೆಗೂ ಕುಸ್ತಿ ಫೆಡರೇಶನ್ನ ಅಧಿಕಾರಿಯಾಗಿದ್ದ ವ್ಯಕ್ತಿಯೊಬ್ಬರು ಮಾಧ್ಯಮದ ಜೊತೆ ಮಾತನಾಡಿ, ‘ಪ್ರತಿಭಟನಾ ನಿರತ ಕುಸ್ತಿಪಟುಗಳ ಉದ್ದೇಶ ಏನು ಎನ್ನುವುದು ಈಗ ಇನ್ನಷ್ಟು ಸ್ಪಷ್ಟವಾಗಿದೆ. ಫೆಡರೇಶನ್ ಮೇಲೆ ನಿಯಂತ್ರಣ ಸಾಧಿಸುವುದೇ ಅವರ ಗುರಿ’ ಎಂದಿದ್ದಾರೆ.
ಸ್ಯಾಫ್ ಕಪ್: ಲೆಬನಾನ್, ಮಾಲ್ಡೀವ್ಸ್ ತಂಡಕ್ಕೆ ಜಯ
ಬೆಂಗಳೂರು: 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಲೆಬನಾನ್ ಹಾಗೂ ಮಾಲ್ಡೀವ್ಸ್ ತಂಡಗಳು ಗೆಲುವಿನ ಆರಂಭ ಪಡೆದಿವೆ. ಗುರುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಲೆಬನಾನ್ 2-0 ಗೋಲುಗಳಲ್ಲಿ ಜಯಿಸಿತು. 79ನೇ ನಿಮಿಷದಲ್ಲಿ ಹಸ್ಸನ್ ಮಾಟೌಕ್, 90+6ನೇ ನಿಮಿಷದಲ್ಲಿ ಖಲೀಲ್ ಗೋಲು ಬಾರಿಸಿದರು. ‘ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಭೂತಾನ್ ವಿರುದ್ಧ ಬಾಂಗ್ಲಾ 2-0ಯಲ್ಲಿ ಗೆಲುವು ಪಡೆಯಿತು. 6ನೇ ನಿಮಿಷದಲ್ಲಿ ಹಮ್ಜಾ ಮೊಹಮದ್, 90ನೇ ನಿಮಿಷದಲ್ಲಿ ನೈಜ್ ಹಸ್ಸನ್ ಗೋಲು ಗಳಿಸಿದರು.
ಸ್ಯಾಫ್ ಕಪ್ ಅಂಕಪಟ್ಟಿ
ಗುಂಪು ‘ಎ’
ತಂಡ ಪಂದ್ಯ ಜಯ ಸೋಲು ಡ್ರಾ ಅಂಕ
ಭಾರತ 01 01 00 00 03
ಕುವೈತ್ 01 01 00 00 03
ನೇಪಾಳ 01 00 01 00 00
ಪಾಕಿಸ್ತಾನ 01 00 01 00 00
ಗುಂಪು ‘ಬಿ’
ತಂಡ ಪಂದ್ಯ ಜಯ ಸೋಲು ಡ್ರಾ ಅಂಕ
ಲೆಬನಾನ್ 01 01 00 00 03
ಮಾಲ್ಡೀವ್್ಸ 01 01 00 00 03
ಬಾಂಗ್ಲಾದೇಶ 01 00 01 00 00
ಭೂತಾನ್ 01 00 01 00 00