ಸುಶೀಲ್ ಕುಮಾರ್ ಏಷ್ಯಾ ಕುಸ್ತಿಗೆ ಅನುಮಾನ

First Published 16, Jan 2018, 8:32 PM IST
Injured Sushil Kumar doubtful for Asian Wrestling Championships
Highlights

2008 ಹಾಗೂ 2012ರ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶದ ಪರವಾಗಿ ಸತತ 2 ಪದಕ ಗೆದ್ದಿರುವ ಸುಶೀಲ್ ಕುಮಾರ್, ಏಪ್ರಿಲ್'ನಲ್ಲಿ ಜರುಗಲಿರುವ ಕಾಮನ್'ವೆಲ್ತ್ ಕ್ರೀಡಾಕೂಟದ ವೇಳೆಗೆ ಫಿಟ್ ಆಗಲಿದ್ದಾರೆ ಎಂದು ಯಶ್ವೀರ್ ಹೇಳಿದ್ದಾರೆ.

ನವದೆಹಲಿ(ಜ.16): ದೇಶದ ಸ್ಟಾರ್ ಕುಸ್ತಿಪಟು ಸುಶೀಲ್ ಕುಮಾರ್ ಏಷ್ಯಾ ಕುಸ್ತಿ ಚಾಂಪಿಯನ್‌'ಶಿಪ್‌'ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ಕಿರ್ಗಿಸ್ತಾನದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಒಲಂಪಿಯನ್ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ.  ಕಳೆದ ವಾರ ಅಭ್ಯಾಸ ನಡೆಸುವ ವೇಳೆಯಲ್ಲಿ ಸುಶೀಲ್ ಮಂಡಿ ಗಾಯಕ್ಕೆ ತುತ್ತಾಗಿದ್ದರು ಎಂದು ಅವರ ಕೋಚ್ ಯಶ್ವೀರ್ ಸಿಂಗ್ ಹೇಳಿದ್ದಾರೆ. ಮುಂದಿನ 15 ರಿಂದ 20 ದಿನಗಳ ಕಾಲ ಸುಶೀಲ್‌'ಗೆ ವಿಶ್ರಾಂತಿ ಅಗತ್ಯವಾಗಿದೆ. ಸುಶೀಲ್ ಅಭ್ಯಾಸದಿಂದ ದೂರ ಉಳಿಯುವ ಕಾರಣದಿಂದ ಏಷ್ಯಾ ಕುಸ್ತಿಯ ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆ ಎಂದು ಯಶ್ವೀರ್ ತಿಳಿಸಿದರು.

2008 ಹಾಗೂ 2012ರ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶದ ಪರವಾಗಿ ಸತತ 2 ಪದಕ ಗೆದ್ದಿರುವ ಸುಶೀಲ್ ಕುಮಾರ್, ಏಪ್ರಿಲ್'ನಲ್ಲಿ ಜರುಗಲಿರುವ ಕಾಮನ್'ವೆಲ್ತ್ ಕ್ರೀಡಾಕೂಟದ ವೇಳೆಗೆ ಫಿಟ್ ಆಗಲಿದ್ದಾರೆ ಎಂದು ಯಶ್ವೀರ್ ಹೇಳಿದ್ದಾರೆ.

loader