2020ರ ಪ್ಯಾರಾ ಒಲಿಂಪಿಕ್ಸ್ ಟೂರ್ನಿಗೆ ಸಜ್ಜಾಗುತ್ತಿರುವ ಭಾರತಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ. ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಹಿಂದೆ ಸರಿದಿದ್ದಾರೆ. 

ಮುಂಬೈ(ಜು.17): ಗಾಯದ ಸಮಸ್ಯೆಯಿಂದ ಬಳಲುತ್ತಿರುವ ತಾರಾ ಪ್ಯಾರಾ-ಅಥ್ಲೀಟ್‌ ದೀಪಾ ಮಲಿಕ್‌ 2020ರ ಟೋಕಿಯೋ ಪ್ಯಾರಾ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದಾರೆ. ಈಜು ಕ್ರೀಡೆಯಲ್ಲಿ ವೃತ್ತಿಬದುಕು ಆರಂಭಿಸುವ ಇಚ್ಛೆ ಹೊಂದಿರುವುದಾಗಿ ಅವರು ಹೇಳಿದ್ದಾರೆ. 

ಇದನ್ನೂ ಓದಿ: ನೆರೆ ಪರಿಹಾರಕ್ಕೆ ಅರ್ಧ ಸಂಬಳ ಕೊಟ್ಟ ಹಿಮಾ ದಾಸ್!

2016ರ ರಿಯೋ ಒಲಿಂಪಿಕ್ಸ್‌ನ ಶಾಟ್‌ಪುಟ್‌ ಸ್ಪರ್ಧೆಯಲ್ಲಿ ದೀಪಾ ಬೆಳ್ಳಿ ಗೆದ್ದಿದ್ದರು. ಮುಂದಿನ ವರ್ಷ ಆ.25ರಿಂದ ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ತಾವು ಸ್ಪರ್ಧಿಸುವ ಶಾಟ್‌ಪುಟ್‌ ಹಾಗೂ ಜಾವೆಲಿನ್‌ ಥ್ರೋ ಸ್ಪರ್ಧೆಗಳನ್ನು ತೆಗೆದುಹಾಕಲಾಗಿದೆ ಎಂದು ದೀಪಾ ತಿಳಿಸಿದ್ದಾರೆ.