ಭೀಕರ ಪ್ರವಾಹಕ್ಕೆ ಅಸ್ಸಾಂ ನಲುಗಿದೆ. ಅಸ್ಸಾಂನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದೀಗ ಅಸ್ಸಾಂಗೆ ನೆರವಿನ ಅಗತ್ಯವಿದೆ. ಇದರ ಬೆನ್ನಲ್ಲೇ ಅಥ್ಲೀಟ್ ಹಿಮಾ ದಾಸ್ ಪರಿಹಾರ ನಿಧಿಗೆ ಅರ್ಧ ಸಂಬಳ ನೀಡಿದ್ದಾರೆ.
ಗುವಾಹಟಿ(ಜು.17): ಅಸ್ಸಾಂ ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, ತಾರಾ ಅಥ್ಲೀಟ್ ಹಿಮಾ ದಾಸ್ ತಮ್ಮ ಅರ್ಧ ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ಟ್ವೀಟರ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಹಿಮಾ, ಕಾರ್ಪೋರೇಟ್ ಸಂಸ್ಥೆ ಹಾಗೂ ವೈಯಕ್ತಿಕವಾಗಿ ಪ್ರತಿಯೊಬ್ಬರೂ ನೆರವು ನೀಡುವಂತೆ ಕೋರಿದ್ದಾರೆ. ಹಿಮಾ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾರೆ. ಯುವ ಅಥ್ಲೀಟ್‌ನ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ವಾರವಾರ ಪೋಜ್ನಾನ್ ಗ್ರ್ಯಾನ್ ಪ್ರಿ, ಕುಟ್ನೊ ಅಥ್ಲೆಟಿಕ್ಸ್ ಕೂಟ ಹಾಗೂ ಚೆಕ್ ಗಣರಾಜ್ಯದ ಕ್ಲಾಡ್ನೊ ಅಥ್ಲೆಟಿಕ್ಸ್ ಕೂಟದಲ್ಲಿ ಹಿಮಾ ದಾಸ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ 11 ದಿನಗಳಲ್ಲಿ 3 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
