ಪುಣೆ(ಮೇ.18): ಲೀಗ್‌ನ ಮೊದಲೆರಡು ಪಂದ್ಯಗಳಲ್ಲಿ ತಲಾ 1 ಗೆಲುವು, ಸೋಲು ಕಂಡು ಮಿಶ್ರ ಯಶಸ್ಸು ಸಾಧಿಸಿದ್ದ ಬೆಂಗಳೂರು ರೈನೋಸ್‌, ಹರ್ಯಾಣ ಹೀರೋಸ್‌ ವಿರುದ್ಧ ತನ್ನ 3ನೇ ಪಂದ್ಯದಲ್ಲಿ ಗೆದ್ದು ಇಂಡೋ ಇಂಟರ್‌ನ್ಯಾಷನ್‌ ಕಬಡ್ಡಿ ಪ್ರೀಮಿಯರ್‌ ಲೀಗ್‌ನಲ್ಲಿ ಮತ್ತೆ ಜಯದ ಹಳಿಗೆ ಮರಳಿದೆ.

ಇಲ್ಲಿನ ಬಾಲೆವಾಡಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು, ಹರ್ಯಾಣ ಎದುರು 47-41 ರಿಂದ ಜಯ ಪಡೆಯಿತು.

ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಇದರಿಂದಾಗಿ ಎರಡೂ ತಂಡಗಳು ತಲಾ 11-11 ಅಂಕಗಳಿಸಿ ಸಮಬಲ ಸಾಧಿಸಿದವು. 2ನೇ ಕ್ವಾರ್ಟರ್‌ ನಲ್ಲಿ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಬೆಂಗಳೂರು ತಂಡ 13-7 ರಿಂದ ಮುನ್ನಡೆ ಪಡೆಯಿತು. 3ನೇ ಕ್ವಾರ್ಟರ್‌ನಲ್ಲೂ ಬೆಂಗಳೂರು, ಹರ್ಯಾಣವನ್ನು 13-7 ರಿಂದ ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು. 4ನೇ ಹಾಗೂ ಕೊನೆಯ ಕ್ವಾರ್ಟರ್‌ನಲ್ಲಿ ಮತ್ತೆ ಎರಡೂ ತಂಡಗಳು 16-16 ರಿಂದ ಸಮಬಲದ ಹೋರಾಟ ನಡೆಸಿದವು. ಆದರೂ 6 ಅಂಕಗಳ ಅಂತರದಲ್ಲಿ ಬೆಂಗಳೂರು ತಂಡ ಹರ್ಯಾಣವನ್ನು ಮಣಿಸಿತು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.