ಕುಸ್ತಿಯನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿ: ಭಜರಂಗ್ ಆಗ್ರಹ

ಕುಸ್ತಿಯನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿ ಎಂದು ವಿಶ್ವದ ನಂ.1 ಶ್ರೇಯಾಂಕಿತ ಕುಸ್ತಿಪಟು ಭಜರಂಗ್ ಪೂನಿಯಾ ಕ್ರೀಡಾ ಸಚಿವ ಕಿರಣ್ ರಿಜಿಜು ಬಳಿ ಆಗ್ರಹಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Indian Wrestler Bajrang Punia wants wrestling to be made national sport

ನವದೆಹಲಿ[ಸೆ.25]: ಭಾರತದ ತಾರಾ ಕುಸ್ತಿಪಟು ಭಜರಂಗ್ ಪೂನಿಯಾ, ಕುಸ್ತಿಯನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಭಾರತ ತಂಡದ ರಾಷ್ಟ್ರೀಯ ಕ್ರೀಡೆ ಹಾಕಿಯಾಗಿದೆ.

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2019: ಬೆಳ್ಳಿಗೆ ತೃಪ್ತಿ​ಪಟ್ಟ ದೀಪಕ್‌

ಭಾರತೀಯ ಕುಸ್ತಿಪಟುಗಳು ವಿಶ್ವ ಚಾಂಪಿಯನ್‌ಶಿಪ್, ಒಲಿಂಪಿಕ್ಸ್’ಗಳಲ್ಲಿ ಸತತವಾಗಿ ಪದಕ ಗೆಲ್ಲುತ್ತಿರುವ ಹಿನ್ನೆಲೆಯಲ್ಲಿ, ಕುಸ್ತಿ ರಾಷ್ಟ್ರೀಯ ಕ್ರೀಡೆ ಎಂದು ಕರೆಸಿಕೊಳ್ಳಲು ಯೋಗ್ಯ ಎಂದು ಕೇಂದ್ರ ಕ್ರೀಡಾ ಸಚಿವಾಲಯದಿಂದಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ವೇಳೆ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ರೀಡಾ ಸಚಿವ ರಿಜಿಜು, ‘ಒಂದು ಕ್ರೀಡೆಗೆ ಮಹತ್ವ ನೀಡಲು ಸಾಧ್ಯವಿಲ್ಲ. ಎಲ್ಲಾ ಕ್ರೀಡೆಯೂ ಮುಖ್ಯ. ಕುಸ್ತಿಪಟುಗಳ ಸಾಧನೆ ಬಗ್ಗೆ ಹೆಮ್ಮೆ ಇದೆ’ ಎಂದರು.

ವಿಶ್ವ ಕುಸ್ತಿ ಕೂಟ: ಭಜರಂಗ್‌ಗೆ ಕಂಚು, ಸುಶೀ​ಲ್‌ಗೆ ಶಾಕ್..!

ಕುಸ್ತಿ ಸಾಧಕರಿಗೆ ಕ್ರೀಡಾ ಸಚಿವರಿಂದ ಬಹುಮಾನ

ಕಜಕಿಸ್ತಾನದ ನೂರ್-ಸುಲ್ತಾನ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತೀಯ ಕುಸ್ತಿಪಟುಗಳಿಗೆ ಮಂಗಳವಾರ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಬಹುಮಾನ ನೀಡಿ ಗೌರವಿಸಿದರು. ಪುರುಷರ 86 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ದೀಪಕ್ ಪೂನಿಯಾಗೆ ₹7 ಲಕ್ಷ, ಕಂಚು ಗೆದ್ದ ಭಜರಂಗ್ ಪೂನಿಯಾ (65 ಕೆ.ಜಿ), ವಿನೇಶ್ ಫೋಗಾಟ್ (53 ಕೆ.ಜಿ), ರಾಹುಲ್ ಅವಾರೆ (61 ಕೆ.ಜಿ), ರವಿ ದಹಿಯಾ (57 ಕೆ.ಜಿ)ಗೆ ತಲಾ ₹4 ಲಕ್ಷ ಮೊತ್ತದ ಚೆಕ್ ವಿತರಿಸಿದರು.

 

Latest Videos
Follow Us:
Download App:
  • android
  • ios