Asianet Suvarna News Asianet Suvarna News

ಪ್ಯಾರಿಸ್ ಒಲಿಂಪಿಕ್ಸ್‌ ಬೆನ್ನಲ್ಲೇ ಟೇಬಲ್‌ ಟೆನಿಸ್‌ಗೆ ವಿದಾಯ ಘೋಷಿಸಿದ ಕನ್ನಡತಿ ಅರ್ಚನಾ ಕಾಮತ್‌..!

ಭಾರತದ ಪ್ರತಿಭಾನ್ವಿತ ಟೇಬಲ್ ಟೆನಿಸ್ ತಾರೆ ಅರ್ಚನಾ ಕಾಮತ್ ದಿಢೀರ್ ಎನ್ನುವಂತೆ ವಿದಾಯ ಘೋಷಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Indian Table Tennis Star Archana Kamath quits to pursue academics kvn
Author
First Published Aug 23, 2024, 10:36 AM IST | Last Updated Aug 23, 2024, 10:36 AM IST

ನವದೆಹಲಿ: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಟೇಬಲ್ ಟೆನಿಸ್‌ ತಂಡ ಕ್ವಾಟರ್‌ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡತಿ ಅರ್ಚನಾ ಕಾಮತ್‌, ಕಿರಿಯ ವಯಸ್ಸಿನಲ್ಲಿಯೇ ಒಲಿಂಪಿಕ್ಸ್‌ಗೆ ವಿದಾಯ ಘೋಷಿಸಿದ್ದಾರೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅರ್ಚನಾ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಭಾರತದಲ್ಲಿ ಟೇಬಲ್‌ ಟೆನಿಸ್‌ ಅನ್ನು ವೃತ್ತಿಯಾಗಿ ಸ್ವೀಕರಿಸುವುದು ಆರ್ಥಿಕವಾಗಿ ಉತ್ತಮ ನಿರ್ಧಾರವಲ್ಲ ಎಂಬ ಕಾರಣಕ್ಕೆ ವಿದಾಯ ಹೇಳುತ್ತಿರುವುದಾಗಿ ಮತ್ತು ಜಾಗತಿಕ ಟಾಪ್‌ 100ರ ಪಟ್ಟಿಯಲ್ಲಿ ಇಲ್ಲದ ಕಾರಣ ಮುಂದಿನ ಒಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲುವ ಸಾಧ್ಯತೆ ಇಲ್ಲ ಎನ್ನುವ ಕಾರಣಕ್ಕೆ ವಿದಾಯ ಹೇಳಿದ್ದಾಗಿ ಬಂದ ವರದಿಗಳನ್ನು ಅರ್ಚನಾ ತಿರಸ್ಕರಿಸಿದ್ದಾರೆ.

ಈ ನಿರ್ಧಾರ ಸಂಪೂರ್ಣವಾಗಿ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ್ದು. ಕಳೆದ 15 ವರ್ಷಗಳಲ್ಲಿ ನನಗೆ ಹಣಕಾಸು ಸೇರಿದಂತೆ ಎಲ್ಲಾ ರೀತಿಯಲ್ಲಿ ಅತ್ಯುತ್ತಮ ಬೆಂಬಲ ಸಿಕ್ಕಿದೆ. ಅದಕ್ಕೆ ನಾನು ಕೃತಜ್ಞಳಾಗಿದ್ದಾನೆ ಎಂದು ಅರ್ಚನಾ ಹೇಳಿದ್ದಾರೆ.

ಕರ್ನಾಟಕದ ಫುಟ್ಬಾಲ್‌ನಲ್ಲಿ ಹೊರ ರಾಜ್ಯದ ಆಟಗಾರರ ಪ್ರಾಬಲ್ಯಕ್ಕೆ ಕಾರಣಗಳೇನು?

ಓದಿನಲ್ಲಿಯೂ ಮುಂದಿರುವ ಅರ್ಚನಾ, ಅರ್ಥಶಾಸ್ತ್ರದಲ್ಲಿ ಪದವಿ ಪೂರೈಸಿದ್ದು, ಅಂತರಾಷ್ಟ್ರೀಯ ಸಂಬಂಧ, ಸ್ಟ್ರಾಟೆಜಿ ಮತ್ತು ಸೆಕ್ಯೂರಿಟಿ ವಿಚಾರದಲ್ಲಿ ಉನ್ನತ ವ್ಯಾಸಂಗಕ್ಕೆ ನಿರ್ಧರಿಸಿದ್ದಾರೆ.

ಅಂಡರ್‌-17 ವಿಶ್ವ ಕುಸ್ತಿ: ರೋನಕ್‌ಗೆ ಕಂಚಿನ ಪದಕ

ಅಮ್ಮಾನ್‌(ಜೊರ್ಡನ್‌): ಇಲ್ಲಿ ನಡೆಯುತ್ತಿರುವ ಅಂಡರ್‌-17 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ರೋನಕ್‌ ದಹಿಯಾ ಕಂಚಿನ ಪದಕ ಗೆದ್ದಿದ್ದಾರೆ. ಮಂಗಳವಾರ 110 ಕೆ.ಜಿ. ಗ್ರೀಕೊ-ರೋಮನ್‌ ವಿಭಾಗದ ಕಂಚಿನ ಪದಕ ಪಂದ್ಯದಲ್ಲಿ ರೋನಕ್‌, ಟರ್ಕಿಯ ಎಮ್ರುಲ್ಲಾ ಕ್ಯಾಪ್ಕನ್‌ ವಿರುದ್ಧ 6-1ರಲ್ಲಿ ಗೆಲುವು ಸಾಧಿಸಿದರು. ಇದಕ್ಕೂ ಮೊದಲು ಅವರು ಸೆಮಿಫೈನಲ್‌ನಲ್ಲಿ ಹಂಗೇರಿಯ ಜೊಲ್ಟನ್‌ ವಿರುದ್ಧ ಸೋತಿದ್ದರು. ಇದೇ ವೇಳೆ 43 ಕೆ.ಜಿ. ವಿಭಾಗದಲ್ಲಿ ಅದಿತಿ ಕುಮಾರಿ, 57 ಕೆ.ಜಿ. ವಿಭಾಗದಲ್ಲಿ ನೇಹಾ ಹಾಗೂ 65 ಕೆ.ಜಿ. ವಿಭಾಗದಲ್ಲಿ ಪುಲ್ಕಿತ್‌ ಸೆಮಿಫೈನಲ್‌ ಪ್ರವೇಶಿಸಿದ್ದು, ಪದಕ ಭರವಸೆ ಮೂಡಿಸಿದ್ದಾರೆ.

ವಿರಾಟ್ ಕೊಹ್ಲಿಯ ಅಂದ್ರೆ ಪಂಚಪ್ರಾಣ, ಅವರ ಬಗ್ಗೆ ವಿಚಿತ್ರ ಆಸೆ ಹಂಚಿಕೊಂಡ ಕ್ರಿಕೆಟ್ ಜಗತ್ತಿನ ಬ್ಯೂಟಿ ಕ್ವೀನ್..!

ಹಾಕಿ ಲೆಜೆಂಡ್ ಶ್ರೀಜೇಶ್‌ಗೆ ₹2 ಕೋಟಿ

ತಿರುವನಂತಪುರ: ಪ್ಯಾರಿಸ್‌ ಒಲಿಂಪಿಕ್ಸ್‌ ಹಾಕಿ ವಿಜೇತ ಭಾರತದ ಪುರುಷರ ಹಾಕಿ ತಂಡದ ಗೋಲ್‌ಕೀಪರ್‌ ಶ್ರೀಜೇಶ್‌ಗೆ ಕೇರಳ ಸರ್ಕಾರ ಬುಧವಾರ ₹2 ಕೋಟಿ ನಗದು ಬಹುಮಾನ ಘೋಷಿಸಿದೆ. ಕೇರಳದ ಶ್ರೀಜೇಶ್‌ ಭಾರತ ತಂಡ ಸತತ 2 ಒಲಿಂಪಿಕ್ಸ್‌ಗಳಲ್ಲಿ ಪದಕ ಗೆಲ್ಲಲು ನೆರವಾಗಿದ್ದರು.

ಪ್ಯಾರಾಲಿಂಪಿಕ್ಸ್‌: ಭಾರತದ ಮೊದಲ ತಂಡ ಪ್ಯಾರಿಸ್‌ಗೆ

ನವದೆಹಲಿ: ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತದ ಮೊದಲ ತಂಡ ಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದೆ. ತಾರಾ ಜಾವೆಲಿನ್‌ ಎಸೆತಗಾರ ಸುಮಿತ್‌ ಆಂಟಿಲ್‌ ಸೇರಿದಂತೆ 16 ಮಂದಿ ಈ ತಂಡದಲ್ಲಿದ್ದಾರೆ. ಕ್ರೀಡಾಪಟುಗಳು ಸದ್ಯ ಪ್ಯಾರಿಸ್‌ನ ಹೋಟೆಲ್‌ನಲ್ಲಿ ತಂಗಲಿದ್ದು. ಆ.25ರಂದು ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಲಿದ್ದಾರೆ. ಈ ಬಾರಿ ಭಾರತದ ಒಟ್ಟು 84 ಮಂದಿ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇತರ ಅಥ್ಲೀಟ್‌ಗಳು ಶೀಘ್ರವೇ ಪ್ಯಾರಿಸ್‌ಗೆ ತೆರಳಲಿದ್ದಾರೆ. ಕ್ರೀಡಾಕೂಟ ಆ.28ರಿಂದ ಸೆ.8ರ ವರೆಗೆ ನಡೆಯಲಿದೆ.
 

Latest Videos
Follow Us:
Download App:
  • android
  • ios