ಏಷ್ಯಾಡ್ ಬಾಕ್ಸಿಂಗ್‌ನಲ್ಲಿ ನಿಖಾತ್, ಲವ್ಲೀನಾ ಸ್ಪರ್ಧೆ..!
ಏಷ್ಯನ್ ಗೇಮ್ಸ್‌ಗೆ ಭಾರತ ಬಾಕ್ಸಿಂಗ್ ತಂಡ ಪ್ರಕಟ
ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿರುವ ಕ್ರೀಡಾಕೂಟ
ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗಹೈನ್ ಭಾರತದ ಸವಾಲು ಮುನ್ನಡೆಸಲಿದ್ದಾರೆ
ನವದೆಹಲಿ(ಜು.02): ಚೀನಾದ ಹ್ಯಾಂಗ್ಝೂನಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಭಾರತದ ಬಾಕ್ಸಿಂಗ್ ತಂಡ ಪ್ರಕಟಿಸಲಾಗಿದ್ದು, 2 ಬಾರಿ ವಿಶ್ವ ಚಾಂಪಿಯನ್ ನಿಖಾತ್ ಜರೀನ್, ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗಹೈನ್ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಜಾಸ್ಮೀನ್, ಅರುಂಧತಿ ಚೌಧರಿ, ಪ್ರೀತಿ ಪವಾರ್, ಪರ್ವೀನ್ ಹೂಡಾ ಕೂಡಾ ಕಣಕ್ಕಿಳಿಯಲಿದ್ದಾರೆ.
ಪುರುಷರ ವಿಭಾಗವನ್ನು ದೀಪಕ್ ಭೋರಿಯ ಮುನ್ನಡೆಸಲಿದ್ದು, ಸಚಿನ್, ಶಿವ ಥಾಪ, ನಿಶಾಂತ್ ದೇವ್, ಲಕ್ಷ್ಯ ಚಹರ್, ಸಂಜೀತ್ ಹಾಗೂ ನರೇಂದರ್ ಬರ್ವಾಲ್ ಸಹ ಆಡಲಿದ್ದಾರೆ. ಆದರೆ ಏಷ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಂಘಲ್, ವಿಶ್ವ ಚಾಂಪಿಯನ್ ನೀತು ಗಂಗಾಸ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಬೆಂಗಳೂರಲ್ಲಿ ಇಂದು ರ್‍ಯಾಲಿ ಸ್ಪ್ರಿಂಟ್ ಬೈಕ್ ರೇಸ್
ಬೆಂಗಳೂರು: ಭಾರತೀಯ ರಾಷ್ಟ್ರೀಯ ರ್‍ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ ಭಾನುವಾರ ಇಲ್ಲಿನ ಸರ್ಜಾಪುರದಲ್ಲಿ ನಡೆಯಲಿದ್ದು, ಭಾರತದ ಅಗ್ರ ಬೈಕರ್‌ಗಳು ಸೇರಿ ಒಟ್ಟು ದಾಖಲೆಯ 120 ಮಂದಿ ಪಾಲ್ಗೊಳ್ಳಲಿದ್ದಾರೆ. ಆರಂಭಿಕ ದಕ್ಷಿಣ ವಲಯ ಸುತ್ತು ಬೆಂಗಳೂರಲ್ಲಿ ನಡೆಯಲಿದೆ. ಚಂಡೀಗಢ, ಬರೋಡಾ, ಗುವಾಹಟಿಯಲ್ಲೂ ಸ್ಪರ್ಧೆ ನಡೆಯಲಿದ್ದು, ಫೈನಲ್ ಗೋವಾದಲ್ಲಿ ನಿಗದಿಯಾಗಿದೆ.
Ashes 2023 ಲಾರ್ಡ್ಸ್ ಟೆಸ್ಟ್; ಜಯದ ವಿಶ್ವಾಸದಲ್ಲಿ ಆಸ್ಟ್ರೇಲಿಯಾ..!
10 ಕಿ.ಮೀ. ಐಎನ್‌ಆರ್‌ಸಿಎ ಸ್ಪರ್ಧೆಯು ವಿವಿಧ ವಿಭಾಗಗಳನ್ನು ಹೊಂದಿದೆ. 131 ಸಿಸಿಯಿಂದ 165 ಸಿಸಿ, 166 ಸಿಸಿಯಿಂದ 260 ಸಿಸಿ, 261 ಸಿಸಿ ಯಿಂದ 400 ಸಿಸಿ ಹಾಗೂ ಅಂತಿಮವಾಗಿ 550 ಸಿಸಿ ವರೆಗಿನ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಬೈಕರ್‌ಗಳು ಪಾಲ್ಗೊಳ್ಳಲಿದ್ದಾರೆ.
ಕೊನೆಗೂ ಕಂಠೀರವ ಸ್ಟೇಡಿಯಂಪ್ರೆಸ್ ಬಾಕ್ಸ್‌ಗೆ ಮೇಲ್ಚಾವಣಿ!
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಯಾಫ್ ಕಪ್ ಫುಟ್ಬಾಲ್ ವರದಿಗೆ ತೆರಳುವ ಪತ್ರಕರ್ತರು ಮಳೆಯಲ್ಲಿ ಅವಸ್ಥೆ ಪಡೆಬೇಕಾದ ಸಮಸ್ಯೆಯನ್ನು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ) ಕೊನೆಗೂ ಬಗೆಹರಿಸಿದೆ. ತೆರೆದ ಸ್ಥಳದಲ್ಲಿದ್ದ ಪ್ರೆಸ್ ಬಾಕ್ಸ್(ಪತ್ರಕರ್ತರು ಕೂರುವ ಸ್ಥಳ)ಗೆ ಮೇಲ್ಚಾವಣಿ ಅಳವಡಿಸಲಾಗಿದೆ.
SAFF Cup 202: ಶೂಟೌಟ್‌ನಲ್ಲಿ ಗೆದ್ದ ಭಾರತ ಫೈನಲ್‌ಗೆ ಲಗ್ಗೆ..!
ಟೂರ್ನಿ ಆರಂಭಗೊಂಡ ದಿನದಂದು ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಸೇರಿದ್ದ ಸ್ಥಳೀಯ, ಹೊರ ರಾಜ್ಯ ಹಾಗೂ ಹೊದ ದೇಶದ 70ಕ್ಕೂ ಹೆಚ್ಚು ಪತ್ರಕರ್ತರು ಮಳೆಯಿಂದಾಗಿ ಸಮಸ್ಯೆ ಅನುಭವಿಸಿದ್ದರು. ಲ್ಯಾಟ್‌ಟಾಪ್‌ಗಳನ್ನು ಮಳೆಯಲ್ಲಿ ನೆನೆಯದಂತೆ ಜೋಪಾನ ಮಾಡಲು ಹರಸಾಹಸ ಪಡಬೇಕಾಗಿತ್ತು. ಬಳಿಕ ‘ಕನ್ನಡಪ್ರಭ’ ಈ ಬಗ್ಗೆ ವಿಶೇಷ ವರದಿ ಪ್ರಕಟಿಸಿ ಆಯೋಜಕರ ಗಮನ ಸೆಳೆದಿತ್ತು.
ಶೂಟಿಂಗ್: ವಿಶ್ವಕೂಟ, ಏಷ್ಯಾಡ್‌ಗೆ ರಾಜ್ಯದ ದಿವ್ಯ
ನವದೆಹಲಿ: ಮುಂದಿನ ತಿಂಗಳು ಅಜರ್‌ಬೈಜಾನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಚೀನಾದ ಹಾಂಗ್ಹೊನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಭಾರತ ಶೂಟಿಂಗ್ ತಂಡ ಪ್ರಕಟಗೊಂಡಿದೆ. 22 ಸದಸ್ಯರ ತಂಡದಲ್ಲಿ ಕರ್ನಾಟಕದ ಯುವ ಶೂಟರ್‌ಗಳಾದ ದಿವ್ಯಾ ಟಿ.ಎಸ್ ಹಾಗೂ ತಿಲೋತ್ತಮ ಸೇನ್ ಸ್ಥಾನ ಪಡೆದಿದ್ದಾರೆ.