ನ.10ರಂದು ನಗರದಲ್ಲಿರುವ ಕೆಎಸ್‌ಸಿಎ-ಬಿ ಮೈದಾನದಲ್ಲಿ ಮುಕ್ತ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಕೆಎಸ್‌ಸಿಎ ಮೂರು ಅಥವಾ ನಾಲ್ಕು ತಂಡಗಳನ್ನು ಆಯ್ಕೆ ಮಾಡಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಡಿಸೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಹಿರಿಯ ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿಗೆ ಕರ್ನಾಟಕ ತಂಡ ಆಯ್ಕೆ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯ್ಕೆ ಟ್ರಯಲ್ಸ್‌ ಆಯೋಜಿಸಲಿದೆ. 

ನ.10ರಂದು ನಗರದಲ್ಲಿರುವ ಕೆಎಸ್‌ಸಿಎ-ಬಿ ಮೈದಾನದಲ್ಲಿ ಮುಕ್ತ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಕೆಎಸ್‌ಸಿಎ ಮೂರು ಅಥವಾ ನಾಲ್ಕು ತಂಡಗಳನ್ನು ಆಯ್ಕೆ ಮಾಡಲಿದೆ. ಈ ತಂಡಗಳ ನಡುವೆ ನವೆಂಬರ್‌ ಎರಡು ಮತ್ತು 3ನೇ ವಾರ ಪಂದ್ಯಗಳನ್ನು ಆಯೋಜಿಸಲಿದ್ದು, ಅದರಲ್ಲಿ ಕರ್ನಾಟಕ ತಂಡಕ್ಕೆ ಆಟಗಾರ್ತಿಯರನ್ನು ಆಯ್ಕೆ ಮಾಡಲಿದೆ. 

ಮಿಂಚಿದ ಅಜಿಂಕ್ಯಾ ಪವಾರ್, ಬೆಂಗ್ಳೂರು ಬುಲ್ಸ್‌ ಆಟಕ್ಕೆ ತಲೆಬಾಗಿದ ತಮಿಳ್‌ ತಲೈವಾಸ್

2008ರ ಆಗಸ್ಟ್‌ 31ರ ಮೊದಲು ಜನಿಸಿದ ಆಟಗಾರ್ತಿಯರು ಸೂಕ್ತ ದಾಖಲೆಗಳೊಂದಿಗೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಬಹುದು. 16 ವರ್ಷಕ್ಕಿಂತ ಕೆಳಗಿನವರಿಗೆ ಟ್ರಯಲ್ಸ್‌ನಲ್ಲಿ ಅವಕಾಶವಿಲ್ಲ ಎಂದು ಕೆಎಸ್‌ಸಿಎ ತಿಳಿಸಿದೆ.

ಮುಷ್ತಾಕ್‌ ಅಲಿ ಟಿ20: ಕರ್ನಾಟಕ ಸಂಭಾವ್ಯರ ತಂಡದಲ್ಲಿ ರಾಹುಲ್‌

ಬೆಂಗಳೂರು: ನ.23ರಿಂದ ಆರಂಭಗೊಳ್ಳಲಿರುವ ಸೆಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಗೆ ಕರ್ನಾಟಕ ಸಂಭಾವ್ಯರ ತಂಡ ಪ್ರಕಟಿಸಲಾಗಿದೆ. 26 ಆಟಗಾರರ ಪಟ್ಟಿಯಲ್ಲಿ ಕೆ.ಎಲ್‌.ರಾಹುಲ್‌ ಕೂಡಾ ಸ್ಥಾನ ಗಿಟ್ಟಿಕೊಂಡಿದ್ದಾರೆ. ಎಲ್ಲಾ ಆಟಗಾರರು ನ.11ರಂದು ಕ್ರೀಡಾಂಗಣದಲ್ಲಿ ಹಾಜರಿರುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಸೂಚಿಸಿದೆ.

ಕಿವೀಸ್‌ ಎದುರು ಭಾರತ ವೈಟ್‌ವಾಶ್‌: ಎದ್ದಿವೆ ಗಂಭೀರ ಪ್ರಶ್ನೆಗಳು!

ತಂಡ: ರಾಹುಲ್‌, ಮಯಾಂಕ್‌, ಮನೀಶ್‌ ಪಾಂಡೆ, ಪ್ರಸಿದ್ಧ್‌ ಕೃಷ್ಣ, ದೇವದತ್‌, ಚೇತನ್‌, ಮ್ಯಾಕ್ಸಿಲ್‌ ನೊರೊನ್ಹಾ, ಶ್ರೇಯಸ್‌ ಗೋಪಾಲ್‌, ಶ್ರೀಜಿತ್‌, ಅಭಿನವ್ ಮನೋಹರ್‌, ಮನೋಜ್‌ ಭಾಂಡಗೆ, ಹಾರ್ದಿಕ್‌ ರಾಜ್‌, ಕೌಶಿಕ್‌, ವಿದ್ಯಾದರ್‌ ಪಾಟೀಲ್‌, ಶುಭಾಂಗ್‌ ಹೆಗ್ಡೆ, ಅಭಿಲಾಶ್‌ ಶೆಟ್ಟಿ, ಮೊಹ್ಸಿನ್ ಖಾನ್‌, ಸ್ಮರಣ್‌, ಲುವ್‌ನಿತ್‌, ವೈಶಾಖ್‌, ಮನ್ವಂತ್‌, ಯಶೋವರ್ಧನ್‌, ಅಧೋಕ್ಷ್‌ ಹೆಗ್ಡೆ, ಶರತ್‌ ಬಿ.ಆರ್‌., ಪ್ರವೀಣ್‌ ದುಬೆ, ವೆಂಕಟೇಶ್‌ ಎಂ.

ಏಕದಿನ: ಪಾಕ್‌ ವಿರುದ್ಧ ಆಸೀಸ್‌ಗೆ 2 ವಿಕೆಟ್‌ ಜಯ

ಮೆಲ್ಬರ್ನ್‌: ಪಾಕಿಸ್ತಾನ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ 2 ವಿಕೆಟ್‌ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಪಾಕ್‌ 46.4 ಓವರ್‌ಗಳಲ್ಲಿ 203 ರನ್‌ಗೆ ಆಲೌಟಾಯಿತು. ನಾಯಕ ರಿಜ್ವಾನ್‌ 44, ನಸೀಂ ಶಾ 40, ಬಾಬರ್‌ ಆಜಂ 37 ರನ್‌ ಗಳಿಸಿ ತಂಡವನ್ನು 200ರ ಗಡಿ ದಾಟಿಸಿದರು. ಸ್ಟಾರ್ಕ್‌ 3 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಆಸೀಸ್‌ 33.3 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಜೋಶ್‌ ಇಂಗ್ಲಿಸ್‌ 49, ಸ್ಟೀವ್‌ ಸ್ಮಿತ್‌ 44, ನಾಯಕ ಪ್ಯಾಟ್‌ ಕಮಿನ್ಸ್‌ ಔಟಾಗದೆ 32 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.