ಮೇಕೆ ತಿಂದು ತೇಗಿದ ಅಧಿಕಾರಿಗಳಿಗೆ ಬಿತ್ತು ದಂಡ, 11 ವರ್ಷದ ಬಾಲಕಿಗೆ ಸಿಕ್ತು 2.5 ಕೋಟಿ ರೂ ಪರಿಹಾರ!

11 ವರ್ಷದ ಬಾಲಕಿಗೆ ಇದೀಗ ಬರೋಬ್ಬರಿ 2.5 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಇದಕ್ಕೆ ಕಾರಣ ಮೇಕೆ. ಅಧಿಕಾರಿಗಳ ಒಂದು ಎಡವಟ್ಟು ಇದೀಗ ದುಬಾರಿ ದಂಡ ತೆರುವಂತೆ ಮಾಡಿದೆ.

Girl awarded rs 2 5 crore compensation after officials auctioned pet goat California ckm

ಬಾಲಕಿ ಮುದ್ದಾಗಿ ಸಾಕಿದ ಮೇಕೆ. ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗಿತ್ತು. ಈ ಮೇಕೆ ಖರೀದಿಸಿ ತಿಂದು ತೇಗಿದ 2 ವರ್ಷದ ಬಳಿಕ ಇದೀಗ ಅಧಿಕಾರಿಗಳಿಗೆ ಹೊಟ್ಟೆ ನೋವು ಶುರುವಾಗಿದೆ. ಕಾರಣ ಈ ಮೇಕೆ ಹರಾಜು ಮಾಡಿ, ಆಡುಗೆ ಮಾಡಿ ಸೇವಿಸಿದ ಕಾರಣಕ್ಕೆ 2.5 ಕೋಟಿ ರೂಪಾಯಿ ಮೊತ್ತವನ್ನು ಪರಿಹಾರ ರೂಪದಲ್ಲಿ ಬಾಲಕಿಗೆ ನೀಡುವಂತೆ ಕೋರ್ಟ್ ಆದೇಶ ಮಾಡಿದೆ. ಈ ಘಟನೆ ಕ್ಯಾಲಿಫೋರ್ನಿಯಾದ ಶಾಸ್ತಾ ಜಿಲ್ಲೆಯಲ್ಲಿ ನಡೆದಿದೆ. ಆದರೆ ಒಂದು ಮೇಕೆ ಇಷ್ಟೊಂದು ದುಬಾರಿಯಾಗುತ್ತೆ ಅನ್ನೋದು ಅಧಿಕಾರಿಗಳು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ.

ಜೆಸ್ಸಿಕಾ ಲ್ಯಾಂಡ್ ತನ್ನ ಮಗಳಿಗೆ ಹೈನುಗಾರಿಕೆ, ಕೃಷಿ ಕುರಿತು ತೊಡಗಿಸಿಕೊಳ್ಳಲು ಹಾಗೂ ಪ್ರಾಯೋಗಿಕವಾಗಿ ಅರ್ಥ ಮಾಡಿಸಲು ಮೇಕೆ ಮರಿಯೊಂದನ್ನು ತಂದುಕೊಟ್ಟಿದ್ದಾರೆ. ಜೀವನ ಪಾಠ ಕಲಿಸಲು ತಂದ ಮೇಕೆ ಬಾಲಕಿಯ ಅಚ್ಚುಮೆಚ್ಚಾಗಿ ಹೊರಹೊಮ್ಮಿತ್ತು. ಈ ಮೇಕೆಗೆ ಸೆಡಾರ್ ಎಂದು ನಾಮಕರಣ ಮಾಡಲಾಗಿತ್ತು. ಮುದ್ದಾಗಿ ಸಾಕಿದ ಕಾರಣ ಮೇಕೆ ದಷ್ಟಪುಷ್ಟವಾಗಿ ಬೆಳೆದಿತ್ತು. ಈ ಮೇಕೆ ಮೇಲೆ ಇಡೀ ಗ್ರಾಮದ ಕಣ್ಣು ಬಿದ್ದಿತ್ತು.

ಖೋಟಾ ನೋಟು ಖದೀಮರ ಹಿಡಿಯಲು ಪೊಲೀಸರಿಗೆ ನೆರವಾದ ಮೇಕೆ, 85 ಲಕ್ಷ ರೂ ನಕಲಿ ಕೆರೆನ್ಸಿ ವಶ!

2022ರಲ್ಲಿ ಶಾಸ್ತ ಜಿಲ್ಲೆಯಲ್ಲಿ ಸರ್ಕಾರಿ ಸಹಯೋಗದ ಹರಾಜು ಆಯೋಜನೆಗೊಂಡಿತ್ತು. ಸ್ಥಳೀಯ ಅಧಿಕಾರಿ ನೇರವಾಗಿ ಮುದ್ದಾಗಿ ಸಾಕಿದ ಮೇಕೆಯನ್ನು ಹರಾಜಿಗಿಡಲು ಸೂಚಿಸಿದ್ದಾರೆ. ಇದಕ್ಕೆ 11 ವರ್ಷದ ಬಾಲಕಿ ಹಾಗೂ ಆಕೆಯ ತಾಯಿ ಜೆಸ್ಸಿಕಾ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಮುದ್ದಾಗಿ ಸಾಕಿದ ಮೇಕೆಯನ್ನು ಹರಾಜಿನಿಂದ ಹೊರಗಿಡಲು ಮನವಿ ಮಾಡಿದ್ದಾರೆ.ಆದರೆ ಸ್ಥಳೀಯ ಅಧಿಕಾರಿಗಳ ಸೂಚನೆ ಕಾರಣ ಸಿಬ್ಬಂದಿಗಳು ಬಂದು ಮೇಕೆಯ್ನು ಎಳೆದೊಯ್ದಿದ್ದಾರೆ.

ಇತ್ತ ಮೇಕೆಗಾಗಿ ಬಾಲಕಿ ಹಾಗೂ ತಾಯಿ ಅತ್ತು ಕರೆದರೂ ಯಾವುದೇ ಪ್ರಯೋಜನವಾಗಿಲ್ಲ. ಹರಾಜಿಗೂ ಮುನ್ನ ಬಾಲಕಿ ಸಾಸಿದ ಮೇಕೆಯನ್ನು ತಮಗೆ ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ. ಎಲ್ಲಾ ಪ್ರಯತ್ನಗಳು ಕೈಗೂಡಲಿಲ್ಲ. ಇತ್ತ ಹರಾಜಿನಲ್ಲಿ ಮೇಕೆ 902 ಅಮೆರಿಕನ್ ಡಾಲರ್‌ ಮೊತ್ತಕ್ಕೆ ಹರಾಜಾಗಿದೆ. ಇತ್ತ ಮೇಕೆ ಖರೀದಿಸಿದವರ ಬಳಿ ಮೇಕೆ ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಈ ಪ್ರಯತ್ನವೂ ಕೈಗೂಡಲಿಲ್ಲ.

ಅಷ್ಟೊತ್ತಿಗೆ ಮೇಕೆ ಹರಾಜು ಮಾಡಿದ ಅಧಿಕಾರಿಗಳು ಹಿರಿ ಹಿರಿ ಹಿಗ್ಗಿದ್ದರು. ಇತ್ತ ಖರೀದಿಸಿದ ಬೆನ್ನಲ್ಲೇ ಮೇಕೆಯ ಅಡುಗೆಯಾಗಿತ್ತು. ಈ ಘಟನೆ ಬಾಲಕಿ ಮನಸ್ಸಿಗೆ ತೀವ್ರ ಆಘಾತ ನೀಡಿತ್ತು. ಮೇಕೆ ಇನ್ನಿಲ್ಲ ಅನ್ನೋದನ್ನು ಬಾಲಕಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಮಾನಸಿಕವಾಗಿ ಬಾಲಕಿ ಕುಗ್ಗಿ ಹೋಗಿದ್ದಳು. ಇತ್ತ ಆಕ್ರೋಶಗೊಂಡ ಬಾಲಕಿ ತಾಯಿ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದೆರಡು ವರ್ಷದಿಂದ ಸತತ ಕಾನೂನು ಹೋರಾಟ ಮಾಡಿದ ಬಾಲಕಿ ತಾಯಿಗೆ ಗೆಲುವು ಸಿಕ್ಕಿದೆ.

ಕಾರಣ ಇನ್ನೇನು ಕೋರ್ಟ್ ಆದೇಶ ಮಾಡಬೇಕು ಅನ್ನೋವಷ್ಟರಲ್ಲಿ ಅಧಿಕಾರಿಗಳು ಪರಿಹಾರ ಮೊತ್ತ ನೀಡಲು ಒಪ್ಪಿಕೊಂಡಿದ್ದಾರೆ. ಇದರಂತೆ 2.5 ಕೋಟಿ ರೂಪಾಯಿ ಮೊತ್ತವನ್ನು ಬಾಲಕಿಗೆ ಪರಿಹಾರವಾಗಿ ನೀಡಲು ಸೂಚಿಸಿದ್ದಾರೆ. ಇದೀಗ ಅಧಿಕಾರಿಗಳು ದುಬಾರಿ ಮೊತ್ತವನ್ನು ದಂಡ ರೂಪದಲ್ಲಿ ಬಾಲಿಕಿ ಹೆಸರಿನಲ್ಲಿ ಜಮೆ ಮಾಡಿದ್ದಾರೆ. ಆದರೆ ಬಾಲಕಿ ಹಾಗೂ ತಾಯಿಗೆ ಈ ಮೊತ್ತ ಯಾವುದೇ ಖುಷಿ ನೀಡಿಲ್ಲ. ಮೇಕೆ ಇಲ್ಲ ಅನ್ನೋ ಕೊರಗು ಕಾಡುತ್ತಲೆ ಇದೆ.  ಈ ಕಾನೂನು ಹೋರಾಟ ಹಣಕ್ಕಾಗಿ ಆಗಿರಲಿಲ್ಲ, ಕಳೆದ 2 ವರ್ಷದಿಂದ ಹೋರಾಡಿದ್ದೇವೆ. ಇದೊಂದು ಪಾಠವಾಗಬೇಕು. ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರಿದ ಈ ಘಟನೆ ಎಲ್ಲಾ ಅಧಿಕಾರಿಗಳಿಗೆ ಎಚ್ಚರಿಕೆಯಾಗಿದೆ ಎಂದು ಬಾಲಕಿ ತಾಯಿ ಜೆಸ್ಸಿಕಾ ಹೇಳಿದ್ದಾರೆ. 

ಚಿಕ್ಕೋಡಿಯಲ್ಲಿ ಬರೋಬ್ಬರಿ 1 ಲಕ್ಷ 80 ಸಾವಿರ ರೂ.ಗೆ ಮಾರಾಟವಾದ ಮೇಕೆ!
 

Latest Videos
Follow Us:
Download App:
  • android
  • ios