ದಿಸ್ಪುರ(ಸೆ.28): ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಗೆ ಭಾಜನರಾದ ಯುವ ಅಥ್ಲೀಟ್‌ ಹಿಮಾ ದಾಸ್‌, ಗುರುವಾರ ಆಸ್ಸಾಂ ರಾಜ್ಯದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 

ಇದನ್ನು ಓದಿ: ಚಿನ್ನ ಗೆದ್ದ ಹಿಮಾ ದಾಸ್’ಗೆ ರೆಡ್ ಕಾರ್ಪೆಟ್ ಸ್ವಾಗತ

ಆಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನವಾಲ್‌, ಹಿಮಾರನ್ನು ರಾಜ್ಯದ ರಾಯಭಾರಿಯಾಗಿ ನೇಮಕ ಮಾಡಿದರು. ಫಿನ್‌ಲ್ಯಾಂಡ್‌ನಲ್ಲಿ ನಡೆದ ಅಂಡರ್‌-20 ಐಎಎಎಫ್‌ ವಿಶ್ವ ಅಥ್ಲೆಟಿಕ್ಸ್‌ ಕೂಟದ 400 ಮೀ. ಓಟದಲ್ಲಿ ಐತಿಹಾಸಿ ಚಿನ್ನ ಗೆದ್ದ ಬಳಿಕ, ಆಸ್ಸಾಂನ ಕ್ರೀಡಾ ರಾಯಭಾರಿಯಾಗಿ ನೇಮಕಗೊಂಡಿದ್ದರು. ಹಿಮಾ ದಾಸ್ ಅರ್ಜುನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದನ್ನು ಓದಿ: ಹಿಮಾ ದಾಸ್ ಬೆಳ್ಳಿ ಗೆದ್ದ ಕ್ಷಣ ನೀವೊಮ್ಮೆ ಕಣ್ತುಂಬಿಕೊಳ್ಳಿ

18 ವರ್ಷದ ಹಿಮಾ, 18ನೇ ಏಷ್ಯನ್‌ ಗೇಮ್ಸ್‌ನಲ್ಲಿ 2 ಪದಕ ಗೆದ್ದು ಗಮನ ಸೆಳೆದಿದ್ದರು. ಅಲ್ಲದೇ ಇತ್ತೀಚೆಗಷ್ಟೇ ಆ್ಯಡಿಡಾಸ್ ಶೂ ಕಂಪನಿಯ ಅಂಬಾಸಿಡರ್ ಆಗಿಯೂ ನೇಮಕವಾಗಿದ್ದರು.