ನವದೆಹಲಿ[ಸೆ.21]: ಅಸ್ಸಾಂನ ರೈತನ ಮಗಳು ಹಿಮಾ ದಾಸ್ ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.

ಅಂಡರ್-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ 2 ಪದಕ ಗೆದ್ದ ಹಿಮಾಗಾಗಿ ಪ್ರತಿಷ್ಠಿತ ಕ್ರೀಡಾ ಉತ್ಪನ್ನಗಳ ಕಂಪನಿ ಆ್ಯಡಿಡಾಸ್ ವಿಶೇಷ ಶೂ ಸಿದ್ಧಪಡಿಸಿದೆ. ಹಿಮಾಗೆ ನೀಡಿರುವ ಶೂ ಮೇಲೆ ಅವರ ಹೆಸರು ದಾಖಲಿಸಲಾಗಿದ್ದು, ಮತ್ತೊಂದು ಕಡೆಯಲ್ಲಿ ‘ಇತಿಹಾಸ ರಚಿಸಲು ಇಲ್ಲಿದ್ದೇನೆ’ ಎಂಬ ಶೀರ್ಷಿಕೆ ಹಾಕಲಾಗಿದೆ.

ಇದನ್ನು ಓದಿ: ಹಿಮಾ ದಾಸ್ ಬೆಳ್ಳಿ ಗೆದ್ದ ಕ್ಷಣ ನೀವೊಮ್ಮೆ ಕಣ್ತುಂಬಿಕೊಳ್ಳಿ

ಇದನ್ನು ಓದಿ: ಚಿನ್ನ ಗೆದ್ದ ಹಿಮಾ ದಾಸ್’ಗೆ ರೆಡ್ ಕಾರ್ಪೆಟ್ ಸ್ವಾಗತ

ಅಸ್ಸಾಂನ ಕುಗ್ರಾಮವೊಂದರ ಗದ್ದೆಗಳಲ್ಲಿ ಓಡುತ್ತಿದ್ದ ಹಿಮಾ, ಈಗ ಭಾರತಕ್ಕೆ ಒಲಿಂಪಿಕ್ಸ್ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಿಮಾರ ಹೊಸ ಆ್ಯಡಿಡಾಸ್ ಶೂ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಫೋಟೋಗಳು ವೈರಲ್ ಆಗಿವೆ.

ಇದನ್ನು ಓದಿ: ಪದಕ ವಿಜೇತ ಸ್ವಪ್ನ ಬರ್ಮನ್‌ಗೆ 6 ಬೆರಳಿನ ಶೂ ನೀಡಲಿದೆ ಅಡಿಡಾಸ್!