ನವದೆಹಲಿ(ಸೆ.08): ಏಷ್ಯನ್ ಗೇಮ್ಸ್‌ನಲ್ಲಿ 3 ಪದಕ ಗೆದ್ದಿರುವ ಹಿಮಾ ದಾಸ್‌ಗೆ, ಶುಕ್ರವಾರ ತವರಿನಲ್ಲಿ ಅಥ್ಲೆಟಿಕ್ಸ್ ಟ್ರ್ಯಾಕ್ ರೀತಿಯಲ್ಲೇ ಸಿದ್ಧಪಡಿಸಿದ್ದ ರೆಡ್ ಕಾರ್ಪೆಟ್ ಸ್ವಾಗತ ದೊರೆಯಿತು.

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಹಿಮಾರನ್ನು ಸ್ವಾಗತಿಸಲು ಸ್ವತಃ ಗುವಾಹಟಿ ಏರ್‌ಪೋರ್ಟ್‌ಗೆ ಬಂದಿದ್ದರು. ಏಷ್ಯನ್ ಗೇಮ್ಸ್ ಬಳಿಕ ಇದೇ ಮೊದಲ ಬಾರಿಗೆ ತವರಿಗೆ ಆಗಮಿಸುತ್ತಿರುವ ಹಿಮಾ ಅವರ ರೆಡ್ ಕಾರ್ಪೆಟ್ ಸ್ವಾಗತದ ಫೋಟೋಗಳನ್ನು ಟ್ವೀಟರ್‌ನಲ್ಲಿ ಹಾಕಲಾಗಿದೆ. 

ಕಿರಿಯರ ವಿಶ್ವಚಾಂಪಿಯನ್ ಹಿಮಾ, ಏಷ್ಯಾಡ್ 400 ಮೀ.ನಲ್ಲಿ ಬೆಳ್ಳಿ ಗೆದ್ದಿದ್ದರು. ಬಳಿಕ ಮಿಶ್ರ 4/400 ರಿಲೇಯಲ್ಲಿ ಬೆಳ್ಳಿ ಗೆದ್ದರೆ, ಮಹಿಳಾ 4/400 ರಿಲೇಯಲ್ಲಿ ಚಿನ್ನ ಜಯಿಸಿದ್ದರು.