ಈ ಬಾರಿ ಕೃತಿ ಸನೊನ್ ಮಾತ್ರವಲ್ಲದೇ ಖ್ಯಾತ ಗಾಯಕ ಬೆನ್ನಿ ದಯಾಳ್ ಅವರ ಗಾನಸುಧೆಯನ್ನು ಪ್ರೇಕ್ಷಕರು ಆಲಿಸಲಿದ್ದಾರೆ.

ಬೆಂಗಳೂರು(ಏ.08): ಐಪಿಎಲ್ ನಡೆಯುವ ಎಲ್ಲಾ 8 ನಗರಗಳಲ್ಲೂ ಉದ್ಘಾಟನಾ ಸಮಾರಂಭ ನಡೆಸುವ ಬಿಸಿಸಿಐ ತೀರ್ಮಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶುಕ್ರವಾರ ರಾಜ್'ಕೋಟ್'ನಲ್ಲಿ ಟೈಗರ್ ಶ್ರಾಫ್ ಪ್ರದರ್ಶನವನ್ನು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶ್ರಾಫ್ ಅವರ ಮೊದಲ ಚಿತ್ರ 'ಹೀರೋಪಂತಿ'ಯ ನಾಯಕಿ ಕೃತಿ ಸನೊನ್ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇದಕ್ಕಾಗಿ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 50ಕ್ಕೂ ಹೆಚ್ಚು ಸಹನೃತ್ಯಗಾರರೊಂದಿಗೆ ಹೆಜ್ಜೆಹಾಕಿ ಉದ್ಘಾಟನಾ ಸಮಾರಂಭಕ್ಕೆ ತಾಲೀಮು ನಡೆಸಿದರು.

ಕೃತಿ ಸನೊನ್ ಮಾತ್ರವಲ್ಲದೇ ಖ್ಯಾತ ಗಾಯಕ ಬೆನ್ನಿ ದಯಾಳ್ ಅವರ ಗಾನಸುಧೆಯನ್ನು ಪ್ರೇಕ್ಷಕರು ಆಲಿಸಲಿದ್ದಾರೆ.