ಭಾರತದ ಟೆನಿಸ್ ದಂತಕಥೆಗಳಾದ ಲಿಯಾಂಡರ್ ಪೇಸ್ ಹಾಗೂ ವಿಜಯ್ ಅಮೃತರಾಜ್ ಅಂತಾರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನ್ಯೂಪೋರ್ಟ್(ಅಮೆರಿಕ): ಭಾರತದ ದಿಗ್ಗಜ ಟೆನಿಸ್ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ವಿಜಯ್ ಅಮೃತರಾಜ್ ಅಂತಾರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್‌ಗೆ ಭಾನುವಾರ ಸೇರ್ಪಡೆಯಾದರು. ಈ ಮೂಲಕ ಏಷ್ಯಾದಿಂದ ಈ ಗೌರವ ಪಡೆದ ಮೊದಲಿಗರು ಎಂಬ ಖ್ಯಾತಿ ಪಡೆದಿದ್ದಾರೆ.
1996ರ ಅಟ್ಲಾಂಟಾ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಕಂಚು, ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ 8 ಪುರುಷರ ಡಬಲ್ಸ್, 10 ಮಿಶ್ರ ಡಬಲ್ಸ್ ಕಿರೀಟ ಪ್ರಸಿದ್ಧ ಗೆದ್ದಿರುವ 51 ವರ್ಷದ ಪೇಸ್ ‘ಆಟಗಾರ’ ವಿಭಾಗದಲ್ಲಿ ಹಾಲ್ ಆಫ್ ಫೇಮ್ ಸೇರ್ಪಡೆಗೊಂಡರು. ಮತ್ತೊಂದೆಡೆ ಗ್ರ್ಯಾನ್‌ಸ್ಲಾಂ ಹಾಗೂ ಡೇವಿಸ್ ಕಪ್‌ಗಳಲ್ಲಿ ಮಹತ್ವದ ಸಾಧನೆ ಮಾಡಿರುವ 70 ವರ್ಷದ ವಿಜಯ್ ಅವರು ‘ಕಾಂಟ್ರಿಬ್ಯೂಟರ್’ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರರಾದರು.
ಅಮೃತರಾಜ್ ವಿಂಬಲ್ಡನ್, ಯುಎಸ್ ಓಪನ್‌ನಲ್ಲಿ ತಲಾ 2 ಬಾರಿ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಅಲ್ಲದೆ 1974, 1987 ರಲ್ಲಿ ಭಾರತ ತಂಡವನ್ನು 2 ಬಾರಿ ಡೇವಿಸ್ ಕಪ್ ಫೈನಲ್‌ಗೇರಿಸಿದ್ದಾರೆ.
ಭಾರತದ ಯೂಕಿ ಭಾಂಬ್ರಿ ಸ್ವಿಸ್ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಚಾಂಪಿಯನ್
ಸ್ಟಾಡ್(ಸ್ವಿಜರ್‌ಲೆಂಡ್): ಭಾರತದ ತಾರಾ ಟೆನಿಸಿಗ ಯೂಕಿ ಭಾಂಬ್ರಿ ಸ್ವಿಸ್ ಓಪನ್ ಎಟಿಪಿ 250 ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಜೊತೆಗೂಡಿ ಕಣಕ್ಕಿಳಿದಿದ್ದ ಭಾಂಬ್ರಿ, ಫೈನಲ್‌ನಲ್ಲಿ ಫ್ರಾನ್ಸ್‌ನ ಯುಗೊ ಹಂಬರ್ಟ್-ಫ್ರಾಬ್ರಿಕ್ ಮಾರ್ಟಿನ್ ವಿರುದ್ಧ 3-6, 6-3, 10-6 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಇದರೊಂದಿಗೆ 32 ವರ್ಷದ ಭಾಂಬ್ರಿ ತಮ್ಮ ಟೆನಿಸ್ ವೃತ್ತಿ ಜೀವನದ 3ನೇ ಎಟಿಪಿ ಟ್ರೋಫಿ ಮುಡಿಗೇರಿಸಿಕೊಂಡರು. 2023ರಲ್ಲಿ ದ.ಆಫ್ರಿಕಾದ ಲಾಯ್ಡ್ ಹ್ಯಾರಿಸ್ ಜೊತೆಗೂಡಿ ಮಲೋರ್ಕಾ ಚಾಂಪಿಯನ್‌ಶಿಪ್ ಹಾಗೂ 2024ರಲ್ಲಿ ಒಲಿವೆಟ್ಟಿ ಜೊತೆಗೂಡಿ ಬಿಎಂಡಬ್ಲ್ಯುಓಪನ್ ಪ್ರಶಸ್ತಿ ಗೆದ್ದಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ 2024: ಪದಕ ಭೇಟೆಗೆ ಹೊರಟ ಭಾರತೀಯ ಅಥ್ಲೀಟ್‌ಗಳಿಗೆ ಬಿಸಿಸಿಐ ಬಂಪರ್ ಗಿಫ್ಟ್..!
ಮುಖ್ಯಮಂತ್ರಿ ಕಪ್ ಫುಟ್ಬಾಲ್: ಶಾಂತಿನಗರ ಚಾಂಪಿಯನ್
ಬೆಂಗಳೂರು: ಚೊಚ್ಚಲ ಆವೃತ್ತಿಯ ಮುಖ್ಯಮಂತ್ರಿ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರಿನ ಶಾಂತಿನಗರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಗರದ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ)ಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಿವಿ ರಾಮನ್ ನಗರ ತಂಡದ ವಿರುದ್ಧ ಶಾಂತಿನಗರ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಜಯಭೇರಿ ಬಾರಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿತ್ತು. ಹೀಗಾಗಿ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಕೆಎಸ್‌ಎಫ್‌ಎ ಅಧ್ಯಕ್ಷ, ಶಾಸಕ ಎನ್.ಎ.ಹ್ಯಾರಿಸ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, ಹಿರಿಯ ಫುಟ್ಬಾಲ್ ಆಟಗಾರ ಸುನಿಲ್ ಚೆಟ್ರಿ ಚಾಂಪಿಯನ್ ತಂಡಕ್ಕೆ ಟ್ರೋಫಿ ಹಸ್ತಾಂತರಿಸಿದರು.
ವಿಧಾನಸೌಧದಲ್ಲಿ ಚೆಸ್ ಹಬ್ಬ, ಶಾಸಕರು ಚಕ್ಕರ್-ಸ್ಟೀಕರ್ ಹಾಜರ್, ಕಪ್ ಮುಡಿಗೇರಿಸಿಕೊಂಡ ಶಾಸಕ ಧರ್ಮಸಿಂಗ್
ಇಂದಿನಿಂದ ಕರ್ನಾಟಕ ರಾಜ್ಯ ಮಹಿಳಾ ಫುಟ್ಬಾಲ್ ಲೀಗ್
ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ) ಆಯೋಜಿಸುವ ರಾಜ್ಯ ಮಹಿಳಾ ಫುಟ್ಬಾಲ್ ಲೀಗ್ ಸೋಮವಾರದಿಂದ ಆರಂಭಗೊಳ್ಳಲಿದೆ. ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ, ಕೊಡಗು ಎಫ್‌ಸಿ, ಕಿಕ್‌ಸ್ಟಾರ್ಟ್ ಎಫ್‌ಸಿ, ಮಾತೃ ಪ್ರತಿಷ್ಠಾನ, ಕೆಂಪ್ ಎಫ್‌ಸಿ, ಪಿಂಕ್ ಪ್ಯಾಂಥರ್ಸ್ ಸೇರಿದಂತೆ 10 ತಂಡಗಳು ಪಾಲ್ಗೊಳ್ಳಲಿವೆ.
ಪ್ರತಿ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ಇತರೆಲ್ಲಾ ತಂಡಗಳ ವಿರುದ್ಧ ತಲಾ 1 ಪಂದ್ಯಗಳನ್ನಾಡಲಿವೆ. ಎಲ್ಲಾ ಪಂದ್ಯಗಳಿಗೆ ನಗರದ ಕೆಎಸ್‌ಎಫ್‌ಎ ಫುಟ್ಬಾಲ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಸದ್ಯ ಕೆಎಸ್‌ಎಫ್‌ಎ ಆ.2ರ ವರೆಗಿನ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದ್ದು, ಇನ್ನುಳಿದ ಪಂದ್ಯಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
