ವಿಧಾನಸೌಧದಲ್ಲಿ ಚೆಸ್‌ ಹಬ್ಬ, ಶಾಸಕರು ಚಕ್ಕರ್-ಸ್ಟೀಕರ್ ಹಾಜರ್, ಕಪ್‌ ಮುಡಿಗೇರಿಸಿಕೊಂಡ ಶಾಸಕ ಧರ್ಮಸಿಂಗ್‌

ವಿಧಾನಸೌಧ ಬಾಂಕ್ವೆಟ್‌ ಹಾಲ್‌ನಲ್ಲಿ ರೌಂಡ್‌ ರಾಬಿನ್‌ ಪದ್ಧತಿಯಲ್ಲಿ ನಡೆದ ಚದುರಂಗ ಆಟ. ಬೆಳಗಾವಿಯ ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್‌ ಸೋಲಿಸಿದ ಡಾ. ಅಜಯ್‌ ಸಿಂಗ್‌ ಸೋಮವಾರ ವಿಧಾನಸಭಾಧ್ಯಕ್ಷ ಯುಟಿ ಖಾದರ್‌, ಸಿಎಂ ಸಿದ್ದರಾಮಯ್ಯರಿಂದ ಟ್ರೋಫಿ ವಿತರಣೆ

MLA Ajay Singh win Legislature Cup 2024  at Vidhana Soudha Chess Festival gow

ಬೆಂಗಳೂರು (ಜು.21):ಬುದ್ಧಿವಂತರ ಆಟ ಎಂದು ಪರಿಗಣಿಸಲಾಗಿರುವ ಚದುರಂಗದ ಆಟದಿಂದ ಬುದ್ಧಿವಂತಿಕೆ ತಾಳ್ಮೆ ಹೆಚ್ಚುತ್ತದೆ ಎಂದು ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ಫರೀದ್ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಧಾ ನಸೌಧ ಚೆಸ್ ಹಬ್ಬ ಮತ್ತು ಲೆಜಿಸ್ಸೇಚರ್ ಕಪ್ 2024ಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಚೆಸ್‌ ಅಸೋಸಿಯೇಷನ್‌ ಅಧ್ಯಕ್ಷ ಬಿ.ಪಿ.ಅನಂತ್, ಶಾಸಕ ಅಜಯ್ ಸಿಂಗ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ವಿಧಾನ ಪರಿಷತ್‌  ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ  ಇತರರಿದ್ದರು.

ಎಂಜಿನಿಯರಿಂಗ್ ,ಆರ್ಕಿಟೆಕ್ಚರ್ ಕೋರ್ಸ್‌ ಇನ್ನಷ್ಟು ದುಬಾರಿ: ಶುಲ್ಕ ಶೇ.10 ಹೆಚ್ಚಿಸಿ ಶಿಕ್ಷಣ ಇಲಾಖೆ ಆದೇಶ

ಅಂತರಾಷ್ಟೀಯ ಚೆಸ್‌ ದಿನಾಚರಣೆ ಹಾಗೂ ಫಿಡೆ ಶತಮಾನೋತ್ಸವ ಅಂಗವಾಗಿ ಕರ್ನಾಟಕ ವಿಧಾನ ಮಂಡಲ ಹಾಗೂ ಅಖಿಲ ಭಾರತ ಚೆಸ್‌ ಫೆಡರೇಷನ್‌ ಸಹಯೋಗದಲ್ಲಿ ಶನಿವಾರ ಸಚಿವರು, ಶಾಸಕರು, ಉಭಯ ಸದನಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗಾಗಿ ನಡೆದ ವಿಧಾನ ಸೌಧ ಓಪನ್‌ ರ್ಯಾಪಿಡ್‌ ಚೆಸ್‌ ಟೂರ್ನಾಮೆಂಟ್‌- 2024 ಚದುರಂಗ ಪಂದ್ಯಾಟದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್‌ ಧರ್ಮಸಿಂಗ್‌ ಅವರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಇದರೊಂದಿಗೆ ಇದೇ ಮೊದಲ ಬಾರಿಗೆ ವಿಧಾನ ಸೌಧದಲ್ಲಿ ನಡೆದ ಚೆಸ್‌ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡದ್ದಲ್ಲದೆ, ರೌಂಡ್ ರಾಬಿನ್‌ ಲೀಗ್‌ ಮಾದರಿಯಲ್ಲಿ ನಡೆದಂತಹ ಚದುರಂಗದ ಆಟದ ಸ್ಪರ್ಧೆಯಲ್ಲಿ ಬೆಳಗಾವಿಯ ಖಾನಾಪುರ ಶಾಸಕರಾದ ವಿಠ್ಠಲ ಸೋಮಣ್ಣ ಹಲಗೇಕರ್‌ ಇವರನ್ನು ಪರಾಭವಗೊಳಿಸಿ ಚಾಂಪಿನಯನ್‌ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.

ಮೈಸೂರು ಕೆಫೆ ಓನರ್‌ ಗುರುತಿಸಿ ರಾಧಿಕಾಳನ್ನು ಕರೆದು ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅನಂತ್ ಅಂಬಾನಿ!

ಚೆಸ್‌ ಟೂರ್ನಿ 2 ವರ್ಗಗಳಾಗಿ ವಿಂಗಡಿಸಲಾಗಿತ್ತು, ಎ ಗುಂಪಿನಲ್ಲಿ ಸಚಿವರು ಹಾಗೂ ವಿಧಾನ ಸಭೆ, ವಿಧಾನ ಪರಿಷತ್‌ ಸದನ ಸದಸ್ಯರಗಾಗಿ ನಡೆಸಲಾದರೆ, ಬಿ ಗುಂಪಿನಲ್ಲಿ ಉಭಯ ಸದನಗಳ ಅಧಿಕಾರಿ, ಸಿಬ್ಬಂದಿಗೆ ಪಂದ್ಯಾಟ ಏಪ್ರಡಿಸಲಾಗಿತ್ತು.

ಇದೇ ಮೊದಲ ಬಾರಿಗೆ ವಿಶ್ವ ಚೆಸ್‌ ದಿನದಂಗವಾಗಿ ಸಭಾಧ್ಯಕ್ಷ .ಯೂಟಿ ಖಾದರ್‌ ಅವರ ಆಸಕ್ತಿಯಿಂದಾಗಿ ಚದುರಂಗದ ಸ್ಪರ್ಧೆ ವಿಧಾನ ಸಭೆಯ ಬಾಂಕ್ವೆಟ್‌ ಹಾಲ್‌ನಲ್ಲಿ ನಡೆಯಿತು. ನೋಂದಣಿಯಂತೆ 5 ರಿಂದ 6 ಸುತ್ತುಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಿಕೆ ಕಂಡು ಬಂದಿತ್ತಲ್ಲದೆ ಶಾಸಕರ ನಡುವಿನ ಸ್ಪರ್ಧೆಯಲ್ಲಿ ಶಾಸಕ ಡಾ. ಅಜಯ್‌ ಸಿಂಗ್‌ ಅತ್ಯುತ್ತಮ ಹಾಗೂ ಚಾಕಚಕ್ಯತೆಯೊಂದಿಗೆ ಚುದುರಂಗದ ಆಟದಲ್ಲಿ ತಮ್ಮ ನಡೆ, ನಿರ್ಧಾರಗಳನ್ನು ತೋರುತ್ತ ಎದುರಾಳಿಗಳನ್ನು ಪರಾಭವಗೊಳಿಸುವಲ್ಲಿ ಯಶಸ್ವಿಯಾದರು.

ಚೆಸ್‌ಗೆ ಶಾಸಕರ ಗೈರು: ಶಾಸಕರು ಹಾಗೂ ವಿಧಾನಸೌಧ ಅಧಿಕಾರಿಗಳಿಗೆ ಚೆಸ್ ಸ್ಪರ್ಧೆ ಅಧ್ಯಕ್ಷ ಏರ್ಪಡಿಸಿದ್ದರೂ, ಯಾವೊಬ್ಬ ಶಾಸಕರೂ ಚೆಸ್ ಹಬ್ಬದಲ್ಲಿ ಪಾಲ್ಗೊಳ್ಳಲಿಲ್ಲ. ಅಲ್ಲದೆ, ಕೆಲ ಅಧಿಕಾರಿಗಳಷ್ಟೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 

Latest Videos
Follow Us:
Download App:
  • android
  • ios