ಇದೇ ಜುಲೈ 26ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಅಥ್ಲೀಟ್‌ಗಳಿಗೆ ಬಿಸಿಸಿಐ ಭಾನುವಾರ 8.5 ಕೋಟಿ ರುಪಾಯಿ ನೆರವು ಘೋಷಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: ಈ ಬಾರಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾನುವಾರ 8.5 ಕೋಟಿ ರುಪಾಯಿ ನೆರವು ಘೋಷಿಸಿದೆ.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ನಮ್ಮ ಅದ್ಭುತ ಅಥ್ಲೀಟ್‌ಗಳನ್ನು ಬಿಸಿಸಿಐ ಬೆಂಬಲಿಸುತ್ತದೆ ಎಂದು ಘೋಷಿಸಲು ಹೆಮ್ಮೆ ಪಡುತ್ತೇನೆ. ನಾವು ಭಾರತ ಒಲಿಂಪಿಕ್ಸ್‌ ಸಂಸ್ಥೆ(ಐಒಎ)ಗೆ 8.5 ಕೋಟಿ ರುಪಾಯಿ ಹಣ ಒದಗಿಸುತ್ತೇವೆ. ಒಲಿಂಪಿಕ್ಸ್‌ನಲ್ಲಿ ನಮ್ಮ ಅಥ್ಲೀಟ್‌ಗಳು ಉತ್ತಮ ಸಾಧನೆ ಮಾಡಿ, ಭಾರತ ಹೆಮ್ಮೆ ಪಡುವಂತೆ ಮಾಡಬೇಕು. ಜೈ ಹಿಂದ್‌’ ಎಂದು ಶಾ ಬರೆದುಕೊಂಡಿದ್ದಾರೆ.

Scroll to load tweet…

ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತ 117 ಅಥ್ಲೀಟ್‌ಗಳು, 140 ಸಹಾಯಕ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಒಲಿಂಪಿಕ್ಸ್‌ ಜು.26ರಂದು ಆರಂಭಗೊಳ್ಳಲಿದ್ದು, ಆ.11ರಂದು ಮುಕ್ತಾಯಗೊಳ್ಳಲಿದೆ.

ಪ್ಯಾರಿಸ್‌ ತಲುಪಿದ ಭಾರತ ಹಾಕಿ,ಆರ್ಚರಿ ತಂಡ

ಪ್ಯಾರಿಸ್‌: ಭಾರತದ ಆರ್ಚರಿ, ಹಾಕಿ ಹಾಗೂ ರೋಯಿಂಗ್‌ ತಂಡಗಳು ಪ್ಯಾರಿಸ್‌ ಒಲಿಂಪಿಕ್ಸ್‌ನ ಕ್ರೀಡಾ ಗ್ರಾಮ ತಲುಪಿದೆ. ಈ ಬಗ್ಗೆ ಭಾರತ ತಂಡದ ಮುಖ್ಯಸ್ಥ ಗಗನ್‌ ನಾರಂಗ್‌ ಮಾಹಿತಿ ಹಂಚಿಕೊಂಡಿದ್ದಾರೆ. 

‘ಆರ್ಚರಿ ಹಾಗೂ ರೋಯಿಂಗ್ ತಂಡಗಳು ಪ್ಯಾರಿಸ್‌ ತಲುಪಿದ್ದು, ಕ್ರೀಡಾಗ್ರಾಮ ಪ್ರವೇಶಿಸಿದ ಭಾರತದ ಮೊದಲ ತಂಡ’ ಎಂದು 2012ರ ಲಂಡನ್‌ ಒಲಿಂಪಿಕ್ಸ್‌ ಕಂಚು ವಿಜೇತ ಶೂಟರ್‌ ನಾರಂಗ್‌ ತಿಳಿಸಿದ್ದಾರೆ. ಭಾರತದಿಂದ ಈ ಬಾರಿ 117 ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದು, ಇತರ ಅಥ್ಲೀಟ್‌ಗಳು ಶೀಘ್ರವೇ ಪ್ಯಾರಿಸ್‌ಗೆ ತೆರಳಲಿದ್ದಾರೆ. ಜು.26ಕ್ಕೆ ಒಲಿಂಪಿಕ್ಸ್‌ ಆರಂಭಗೊಳ್ಳಲಿದೆ.

ಹಾರ್ದಿಕ್ ಪಾಂಡ್ಯಗೆ ಡಬಲ್ ಶಾಕ್; ಪಾಂಡ್ಯಗಿಂತ ಮೊದಲು ಈ 6 ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಗಿದೆ ಡಿವೋರ್ಸ್..!

ಆ.16ರಿಂದ ಮೈಸೂರಲ್ಲಿ ರಾಜ್ಯ ವೇಟ್‌ಲಿಫ್ಟಿಂಗ್‌ ಕೂಟ

ಮೈಸೂರು: ಮೈಸೂರು ಜಿಲ್ಲಾ ವೇಟ್‌ಲಿಫ್ಟಿಂಗ್‌ ಸಂಸ್ಥೆ ಆಯೋಜಿಸುವ ಕರ್ನಾಟಕ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ ಆ.16ರಿಂದ 18ರ ವರೆಗೆ ಮೈಸೂರಿನಲ್ಲಿ ನಡೆಯಲಿದೆ. ಎಸ್‌ಬಿಆರ್‌ಆರ್‌ ಮಹಾರಾಜ ಕಾಲೇನಿನ ಎಪಿಜೆ ಅಬ್ದುಲ್‌ ಕಲಾಂ ಒಳಾಂಗಣ ಕ್ರೀಡಾಂಗಣದಲ್ಲಿ ಕೂಟ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.