ಲಂಕಾ ಬೌಲರ್'ಗಳನ್ನು ಇಬ್ಬರು ಬ್ಯಾಟ್ಸ್'ಮೆನ್'ಗಳು ಚಂಡಾಡಿದರು. ಧವನ್ ತಮ್ಮ ವೃತ್ತಿ ಜೀವನದ 11 ಶತಕ ದಾಖಲಿಸಿದರೆ, ಕೊಹ್ಲಿ 44ನೇ ಅರ್ಧ ಶತಕ ಬಾರಿಸಿದರು.
ದಂಬುಲ್ಲಾ(ಆ.20): ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡ ಏಕದಿನ ಸರಣಿಯ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದೆ.
ಆರಂಭಿಕ ಆಟಗಾರ ಶಿಖರ್ ಧವನ್ 132(90:3 ಸಿಕ್ಸ್, 20 ಬೌಂಡರಿ)ಭರ್ಜರಿ ಶತಕ ಹಾಗೂ ನಾಯಕ ಕೊಹ್ಲಿ82(70:10 ಬೌಂಡರಿ, 1 ಸಿಕ್ಸ್'ರ್) ಸ್ಫೋಟಕ ಅರ್ಧ ಶತಕದ ನೆರವಿನಿಂದ ಶ್ರೀಲಂಕಾ ತಂಡ ನೀಡಿದ ಸಾಧಾರಣ 216 ರನ್'ಗಳ ಗುರಿಯನ್ನು ಕೇವಲ 28.5 ಓವರ್'ಗಳಲ್ಲಿ 220/1 ರನ್'ಗಳಿಸಿ ಜಯಗಳಿಸಿತು. ಲಂಕಾ ಬೌಲರ್'ಗಳನ್ನು ಇಬ್ಬರು ಬ್ಯಾಟ್ಸ್'ಮೆನ್'ಗಳು ಚಂಡಾಡಿದರು. ಧವನ್ ತಮ್ಮ ವೃತ್ತಿ ಜೀವನದ 11 ಶತಕ ದಾಖಲಿಸಿದರೆ, ಕೊಹ್ಲಿ 44ನೇ ಅರ್ಧ ಶತಕ ಬಾರಿಸಿದರು. ರೋಹಿತ್ ಶರ್ಮಾ ರನ್ ಔಟ್ ಆಗಿದ್ದು ಬಿಟ್ಟರೆ ಗೆಲುವಿನ ರುವಾರಿಗಳಾದ ಧವನ್, ಕೊಹ್ಲಿ'ಯನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ.
ಲಂಕನ್ನರಿಂದ ಸಾಧಾರಣ ಮೊತ್ತ
ದಂಬುಲ್ಲಾದ ರಂಗಿರಿ ದಂಬುಲ್ಲಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 5 ದಿನಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. 14 ಓವರ್'ಗಳ ವರೆಗೂ ಉತ್ತಮವಾಗಿ ಆಟವಾಡದ ಲಂಕಾ ದಾಂಡಿಗರು ನಂತರದಲ್ಲಿ ಒಬ್ಬರ ನಂತರ ಒಬ್ಬರು ಪೆವಿಲಿಯನ್'ಗೆ ತೆರಳಲು ಶುರು ಮಾಡಿದರು. ದಿಕ್'ವೆಲ್ಲಾ (64), ಗುಣತಿಲಕಾ(35), ಮೆಂಡೀಸ್(36) ರನ್'ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದವರ್ಯಾರು ಒಂದಕ್ಕಿಯ ಮೊತ್ತವನ್ನು ದಾಟಲು ಸಾಧ್ಯವಾಗಲಿಲ್ಲ. ನಾಯಕ ಉಪುಲ್ ತರಂಗ ಗಳಿಸಿದ್ದು 13 ರನ್ ಮಾತ್ರ.
ಭಾರತದ ಪರ ಅಕ್ಷರ್ ಪಟೇಲ್ 34/3, ಕೇದಾರ್ ಜಾಧವ್ 26/2,ಚಲಾಲ್ 60/2,ಬುರ್ಮಾ 22/2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಸ್ಫೋಟಕ ಬ್ಯಾಟಿಂಗ್ ಆಡಿ ಶತಕಗಳಿಸಿದ ಶಿಖರ್ ಧವನ್ ಪಂದ್ಯ ಪುರುಷೋತ್ತಮ ಪ್ಋಶಸ್ತಿಕೆ ಭಾಜನರಾದರು.
ಸ್ಕೋರ್
ಶ್ರೀಲಂಕಾ: 216/10(43.2) (ಅಕ್ಸರ್: 34/3, ಜಾಧವ್ 26/2, ಬುರ್ಮಾ 22/2)
ಭಾರತ:220/1 (28.5) (ಧವನ್:132,ಕೊಹ್ಲಿ:82)
ಪಂದ್ಯ ಪುರುಷೋತ್ತಮ: ಶಿಖರ್ ಧವನ್
