Asianet Suvarna News Asianet Suvarna News

ಐಪಿಎಲ್‌ಗಾಗಿ 16 ವರ್ಷಗಳ ಬಳಿಕ ಆಯೋಜನೆಗೊಂಡ ಸರಣಿ ರದ್ದು?

ಐಪಿಎಲ್ ಟೂರ್ನಿಗಾಗಿ ಬರೋಬ್ಬರಿ 16 ವರ್ಷಗಳ ಬಳಿಕ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಸರಣಿಯನ್ನ ರದ್ದು ಮಾಡಲು ಬಿಸಿಸಿಐ ಮುಂದಾಗಿದೆ. ಎರಡನೇ ಬಾರಿಗೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ಆಡೋ ಉತ್ಸಾಹದಲ್ಲಿದ್ದ ತಂಡಕ್ಕೆ ನಿರಾಸೆಯಾಗಿದೆ.

India vs Zimbabwe bilateral series may cancel due to 2019 IPL
Author
Bengaluru, First Published Jan 14, 2019, 3:21 PM IST

ಮುಂಬೈ(ಜ.14): ಐಪಿಎಲ್ ಟೂರ್ನಿ, 2019ರ ವಿಶ್ವಕಪ್ ಸರಣಿಯಿಂದಾಗಿ 16 ವರ್ಷಗಳ ಬಳಿಕ ಆಯೋಜಿಸಲಾದ ದ್ವಿಪಕ್ಷೀಯ ಸರಣಿ ಇದೀಗ ರದ್ದಾಗುವ ಸಾಧ್ಯತೆ ಹೆಚ್ಚಿದೆ. 2019ರ ಲೋಕಸಭಾ ಚುನಾವಣೆಯಿಂದ ಐಪಿಎಲ್ ಟೂರ್ನಿ ಆಯೋಜನೆ ಗೊಂದಲ ಮುಂದುವರಿದಿದೆ. ಹೀಗಾಗಿ ಜಿಂಬಾಬ್ವೆ ವಿರುದ್ದ ಆಯೋಜಿಸಲು ನಿರ್ಧರಿಸಿದ್ದ ದ್ವಿಪಕ್ಷೀಯ ಸರಣಿ ರದ್ದಾಗುವ ಎಲ್ಲಾ ಸಾಧ್ಯತೆ ಇದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಾಗೆ ಮುಂಬೈ ಪೊಲೀಸರಿಂದ ಗೂಗ್ಲಿ!

2002ರ ಬಳಿಕ ಇದೇ ಮೊದಲ ಬಾರಿಗೆ ಜಿಂಬಾಬ್ವೆ ವಿರುದ್ಧದ ದ್ವಿಪಕ್ಷೀಯ ಸರಣಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿತ್ತು. ಏಕೈಕ ಟೆಸ್ಟ್, 3 ಏಕದಿನ ಸರಣಿ ಆಯೋಜಿಸಲು ಬಿಸಿಸಿಐ ತಯಾರಿ ಮಾಡಿಕೊಂಡಿತ್ತು. ಆದರೆ ಐಪಿಎಲ್ ಹಾಗೂ ವಿಶ್ವಕಪ್ ಟೂರ್ನಿಯಿಂದ ಜಿಂಬಾಬ್ವೆ ಸರಣಿ ಕ್ಯಾನ್ಸಲ್ ಮಾಡಲು ಬಿಸಿಸಿಐ ಮುಂದಾಗಿದೆ.

ಇದನ್ನೂ ಓದಿ: 2ನೇ ಏಕದಿನಕ್ಕೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ ಸಾಧ್ಯತೆ!

2016 ಟಿ20 ವಿಶ್ವಕಪ್ ಟೂರ್ನಿಗಾಗಿ ಕೊನೆಯ ಬಾರಿಗೆ ಜಿಂಬಾಬ್ವೆ ಭಾರತಕ್ಕೆ ಆಗಮಿಸಿತ್ತು. 2011ರ ವಿಶ್ವಕಪ್ ಟೂರ್ನಿ, 2006 ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಜಿಂಬಾಬ್ವೆ ಭಾರತಕ್ಕೆ ಆಗಮಿಸಿತ್ತು. ಜಿಂಬಾಬ್ವೆ ವಿರುದ್ದ ಭಾರತ ತವರಿನಲ್ಲಿ ಏಕೈಕ ದ್ವಿಪಕ್ಷೀಯ ಸರಣಿ ಆಯೋಜಿಸಿದೆ.

Follow Us:
Download App:
  • android
  • ios