ಬಿಸಿಸಿಐ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಡುವಿನ ಉಚಿತ ಟಿಕೆಟ್‌ಗಳ ಹಂಚಿಕೆ ವಿವಾದದಿಂದಾಗಿ ಪಂದ್ಯ ಬೇರೆಡೆ ನಡೆಯಲಿದೆ ಎನ್ನಲಾಗುತ್ತಿದೆ. ಬಿಸಿಸಿಐ ನಿಯಮದ ಪ್ರಕಾರ ಟಿಕೆಟ್ ಮಾರಾಟ ನಡೆದಿಲ್ಲ. ಹೀಗಾಗಿ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ[ಆ.01]: ಇಂದೋರ್‌ನಲ್ಲಿ ಅ.24ರಂದು ನಡೆಯಬೇಕಿದ್ದ ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯ ಸ್ಥಳಾಂತರಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಬಿಸಿಸಿಐ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಡುವಿನ ಉಚಿತ ಟಿಕೆಟ್‌ಗಳ ಹಂಚಿಕೆ ವಿವಾದದಿಂದಾಗಿ ಪಂದ್ಯ ಬೇರೆಡೆ ನಡೆಯಲಿದೆ ಎನ್ನಲಾಗುತ್ತಿದೆ. ಬಿಸಿಸಿಐ ನಿಯಮದ ಪ್ರಕಾರ ಟಿಕೆಟ್ ಮಾರಾಟ ನಡೆದಿಲ್ಲ. ಹೀಗಾಗಿ ವಿವಾದಕ್ಕೆ ಕಾರಣವಾಗಿದೆ.

ಇದನ್ನು ಓದಿ:ಭಾರತ ತಂಡಕ್ಕೆ ಮಯಾಂಕ್ ಎಂಟ್ರಿ-ಮತ್ತೊಬ್ಬ ಕನ್ನಡಿಗನಿಗೆ ಕೊಕ್! ಯಾಕೆ ಹೀಗೆ?

ಹೋಳ್ಕರ್ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್’ಗಳ ಪೈಕಿ ಶೇ.90% ಟಿಕೆಟ್’ಗಳನ್ನು ಸಾರ್ವಜನಿಕ ವೀಕ್ಷಕರಿಗೆ ಲಭ್ಯವಿದ್ದರೆ, ಉಳಿದ ಟಿಕೆಟ್’ಗಳು ಕಾಂಪ್ಲಿಮೆಂಟರಿ ಪಾಸ್’ಗಳಾಗಿವೆ. ಅಂದರೆ 27,000 ಟಿಕೆಟ್’ಗಳ ಪೈಕಿ 2,700 ಟಿಕೆಟ್’ಗಳು ಕಾಂಪ್ಲಿಮೆಂಟರಿ ಪಾಸ್’ಗಳಾಗಿ ನೀಡಲಾಗುತ್ತದೆ. ಈ ಕುರಿತಂತೆ ವಿವಾದ ಏರ್ಪಟ್ಟಿದೆ ಎಂದು ಇಂಗ್ಲಿಷ್ ಖಾಸಗಿ ವೆಬ್’ಸೈಟ್’ವೊಂದು ವರದಿ ಮಾಡಿದೆ.