ಟ್ರಿನಿಡಾಡ್(ಆ.14): ಭಾರತ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ಗೆ ಅಂತಿಮ ಪಂದ್ಯವಾಗಿದೆ ಎನ್ನಲಾಗುತ್ತಿದೆ. ವಿದಾಯದ ಪಂದ್ಯ ಎಂದೇ ಬಿಂಬಿತವಾಗಿರುವ ಪಂದ್ಯದಲ್ಲಿ ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಷ್ಟೇ ಅಲ್ಲ ಅಂತಿಮ ಪಂದ್ಯವನ್ನು ಗೇಲ್ ಸ್ಮರಣೀಯವಾಗಿಸಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಪಂದ್ಯದಲ್ಲಿ ಲಾರಾ ರೆಕಾರ್ಡ್ ಬ್ರೇಕ್ ಮಾಡಿದ ಗೇಲ್!

ವಿಶ್ವಕಪ್ ಟೂರ್ನಿ ಬಳಿಕ ಅಂತಾರಾಷ್ಟ್ರೀಯ ಏಕದಿನ ಮಾದರಿಗೆ ವಿದಾಯ ಘೋಷಿಸಿದ್ದ ಗೇಲ್, ಭಾರತ ವಿರುದ್ಧದ ಸರಣಿಗೆ ಮುಂದೂಡಿದ್ದರು. ಗೇಲ್ ಭಾರತ ವಿರುದ್ಧದ ಸರಣಿ ಕೊನೆ ಎಂದು ಎಲ್ಲಾ ಹೇಳಿಕೊಂಡಿಲ್ಲ.  ಭಾರತ ವಿರುದ್ಧದ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ, 2ನೇ ಪಂದ್ಯದಲ್ಲಿ ಗೇಲ್ ನಿರಾಸೆ ಅನುಭವಿಸಿದ್ದರು. ಹೀಗಾಗಿ 3ನೇ ಪಂದ್ಯ ಕುತೂಹಲ ಮೂಡಿಸಿತ್ತು. ವಿದಾಯದ ಪಂದ್ಯದಲ್ಲಿ ಗೇಲ್ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ.

ಇದನ್ನೂ ಓದಿ: ಟೆಸ್ಟ್ ಸರಣಿಗೆ ವಿಂಡೀಸ್ ತಂಡ ಪ್ರಕಟ: ಗೇಲ್ ಕನಸು ಭಗ್ನ..!

ಗೇಲ್ 41 ಎಸೆತದಲ್ಲಿ 72 ರನ್ ಸಿಡಿಸಿದರು.  8 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ ಗೇಲ್ ಅಬ್ಬರಿಸಿದರು. ಭಾರತ ವಿರುದ್ಧದ 2ನೇ ಏಕದಿನ ಪಂದ್ಯ ಆಡೋ ಮೂಲಕ 300ನೇ ಏಕದಿನ ಪಂದ್ಯ ಆಡಿದ ಗೇಲ್, ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ದಾಖಲೆ ಮುರಿದಿದ್ದರು. 10353 ರನ್ ಸಿಡಿಸೋ ಮೂಲಕ ಲಾರಾ ಹಿಂದಿಕ್ಕಿ, ವಿಂಡೀಸ್ ಪರ ಗರಿಷ್ಠ ರನ್ ಸಿಡಿಸಿದ ಏಕದಿನ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದರು. ಇದೀಗ  301ನೇ ಹಾಗೂ ಅಂತಿಮ  ಪಂದ್ಯ ಆಡಿ ಗೇಲ್ ಏಕದಿನ ಕ್ರಿಕೆಟ್‌ಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.