ಬೆಂಗಳೂರು(ಸೆ.08): ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದೆ. ಸೆ. 22ರಂದು ನಡೆಯಲಿರುವ ಪಂದ್ಯದ ಟಿಕೆಟ್’ಗಳು ಕೌಂಟರ್’ನಲ್ಲಿ ಸೆಪ್ಟೆಂಬರ್ 16ರಿಂದ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ಭಾರ​ತಕ್ಕೆ ಬಂದಿ​ಳಿದ ದಕ್ಷಿಣ ಆಫ್ರಿಕಾ ತಂಡ

ಹೌದು, ಕೊನೆಯ ಟಿ20 ಪಂದ್ಯದ ಟಿಕೆಟನ್ನು ಸೆ.16 ರಂದು ಬೆಳಗ್ಗೆ 10 ಗಂಟೆಗೆ ಕೌಂಟರ್‌ನಲ್ಲಿ ಮಾರಾಟ ಮಾಡಲಾಗುತ್ತದೆ. 5000 ರುಪಾಯಿಗಳಿಗಿಂತ ಹೆಚ್ಚಿನ ಬೆಲೆಯ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕೊಂಡುಕೊಳ್ಳಬೇಕು. https://www.ksca.cricket ಮೂಲಕ ಟಿಕೆಟ್‌ ಪಡೆ​ಯ​ಬ​ಹು​ದಾ​ಗಿದೆ. ಕನಿಷ್ಠ 500 ರುಪಾಯಿಂದ ಗರಿಷ್ಠ 10,000 ಬೆಲೆಯ ಟಿಕೆಟ್‌ಗಳು ದೊರೆಯಲಿವೆ. 

ಮತ್ತೆ ಟೀಂ ಇಂಡಿಯಾ ಕಾಲೆಳೆದ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್..!

ಜಿ ಅಪ್ಪರ್‌, ಲೋವರ್‌ 1 ಹಾಗೂ 2 ಸ್ಟ್ಯಾಂಡ್‌ನ 500 ರುಪಾಯಿ ಬೆಲೆಯ ಟಿಕೆಟ್‌ಗಳನ್ನು ಕ್ರೀಡಾಂಗಣದ ಗೇಟ್‌ ನಂ.2 ರಲ್ಲಿ ಮಾರಾಟ ಮಾಡಲಾಗುವುದು ಎಂದು ಕೆಎಸ್‌ಸಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.