ಸೂರತ್[ಅ.02]: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಭಾರತ ವನಿತೆಯರು 2-0ಯಿಂದ ವಶಪಡಿಸಿದ್ದಾರೆ.5  ಪಂದ್ಯಗಳಲ್ಲಿ ಕೊನೆಯ ಟಿ20 ಪಂದ್ಯ ಉಳಿದಿದ್ದು, ಭಾರತ ಸರಣಿ ಗೆದ್ದಿದೆ. 

T20 ಕ್ರಿಕೆಟ್: ಮಿಂಚಿದ ದೀಪ್ತಿ, ಭಾರತಕ್ಕೆ 11 ರನ್ ಜಯ

ಮಂಗಳವಾರ 4ನೇ ಟಿ20 ಭಾರತ 51 ರನ್ ಗಳಿಂದ ಜಯಭೇರಿ ಬಾರಿಸಿತು. ಮಳೆಯಿಂದ 3 ಓವರ್ ಕಡಿತವಾದ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 140 ರನ್ ಪೇರಿಸಿತು. 15 ವರ್ಷದ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಭಾರತಕ್ಕೆ ನೆರವಾದರು. ಚೊಚ್ಚಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಶಫಾಲಿ ತಾವಾಡಿದ ಎರಡನೇ ಪಂದ್ಯದಲ್ಲಿ ಆಫ್ರಿಕಾ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಗಳೊಂದಿಗೆ 46 ರನ್ ಬಾರಿಸಿ ಮಿಂಚಿದರು. ಶಫಾಲಿಗೆ ಜೆಮಿಯಾ ರೋಡ್ರಿಗರ್ಸ್ ಉತ್ತಮ ಸಾಥ್ ನೀಡಿದರು. ಜೆಮಿಯಾ 33 ರನ್ ಬಾರಿಸಿದರು. 

ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

141 ರನ್ ಗುರಿ ಬೆನ್ನತ್ತಿದ ಆಫ್ರಿಕಾ ತಂಡಕ್ಕೆ ಸ್ಪಿನ್ನರ್ ಪೂನಂ ಯಾದವ್ ಕಂಟಕವಾಗಿ ಪರಿಣಮಿಸಿದರು. ದಕ್ಷಿಣ ಆಫ್ರಿಕಾ ಪರ ತಜ್ಮಿನ್ 20 ಹಾಗೂ ಲೌರಾ ವೋಲ್ವರ್ಡ್[23] ಹೊರತುಪಡಿಸಿ ಉಳಿದ್ಯಾವ ಆಟಗಾರ್ತಿಯರು ಎರಡಂಕಿ ಮೊತ್ತ ದಾಖಲಿಸಲಿಲ್ಲ. ಪೂನಂ ಯಾದವ್ 13 ರನ್ ನೀಡಿ 3 ವಿಕೆಟ್ ಪಡೆದರೆ, ರಾಧಾ ಯಾದವ್ 16 ರನ್ ನೀಡಿ 2 ವಿಕೆಟ್ ಪಡೆದರು.   

ಮೊದಲ ಟಿ20 ಭಾರತ ಗೆದ್ದಿತ್ತು. 2ನೇ ಹಾಗೂ 3ನೇ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಶುಕ್ರವಾರ 5ನೇ ಟಿ20 ನಡೆಯಲಿದೆ.