ಸೂರತ್[ಸೆ.25]: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 11 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ದೀಪ್ತಿ ಶರ್ಮಾ ಚಾಣಾಕ್ಷ ದಾಳಿಗೆ ಹರಿಣಗಳ ಪಡೆ ತತ್ತರಿಸಿ ಹೋಯಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. 

ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಹರ್ಮನ್‌ಪ್ರೀತ್ ರ 43 ರನ್ ಕೊಡುಗೆಯಿಂದ 20 ಓವರಲ್ಲಿ 8 ವಿಕೆಟ್‌ಗೆ 130 ರನ್ ಗಳಿಸಿತು. ಮಿಗ್ನೊನ್ ಡು ಪ್ರೀ 59 ರನ್ ಸಿಡಿಸಿದರೂ ತಂಡ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. 19.5 ಓವರ್ ಗಳಲ್ಲಿ 119 ರನ್‌ಗಳಿಗೆ ದ.ಆಫ್ರಿಕಾ ಆಲೌಟ್ ಆಯಿತು.

ಟಿ20 ಪಂದ್ಯದ ಸೋಲಿನ ಬೆನ್ನಲ್ಲೇ ಕೊಹ್ಲಿಗೆ ಮತ್ತೊಂದು ಶಾಕ್!

ಭಾರತ ಪರ ಪದಾರ್ಪಣೆ ಮಾಡಿದ ಶಫಾಲಿ ವರ್ಮಾ: 15 ವರ್ಷದ ಶಫಾಲಿ ವರ್ಮಾ ಭಾರತ ಮಹಿಳಾ ಟಿ20 ತಂಡಕ್ಕೆ ಪದಾರ್ಪಣೆ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಅತಿ ಕಿರಿಯ ಆಟಗಾರ್ತಿ ಎನ್ನುವ ದಾಖಲೆಗೆ ಶಫಾಲಿ ವರ್ಮಾ ಪಾತ್ರರಾಗಿದ್ದಾರೆ. ಆರಂಭಿಕ ಬ್ಯಾಟ್ಸ್ ವುಮನ್ ಆಗಿ ಕಣಕ್ಕಿಳಿದ ಶಫಾಲಿ ಕೇವಲ 4 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. 

ವನಿತೆಯರ ಟೀಂ ಇಂಡಿಯಾಗೆ ಹಿರ್ವಾನಿ ಸ್ಪಿನ್ ಕೋಚ್

ಸತತ 3 ಓವರ್ ಮೇಡನ್ ಎಸೆದ ದೀಪ್ತಿ ಶರ್ಮಾ!

ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ತಾವೆಸೆದ ಮೊದಲ 3 ಓವರ್‌ಗಳಲ್ಲಿ ಒಂದೂ ರನ್ ನೀಡದೇ 3 ವಿಕೆಟ್ ಕಬಳಿಸಿ ಮಿಂಚಿದರು.  ಒಟ್ಟು 4 ಓವರಲ್ಲಿ 3 ಮೇಡನ್ ಸಹಿತ ಕೇವಲ 8 ರನ್ ನೀಡಿ, ತಂಡದ ಗೆಲುವಿಗೆ ನೆರವಾದರು.

ಸ್ಕೋರ್:

ಭಾರತ 130/8
ದ.ಆಫ್ರಿಕಾ 119/10