Asianet Suvarna News Asianet Suvarna News

ಟೀಂ ಇಂಡಿ​ಯಾಗೆ ಸರಣಿ ಜಯದ ಗುರಿ: ಭಾರೀ ಮಳೆ ಮುನ್ಸೂ​ಚ​ನೆ

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಿದೆ. ಈ ಪಂದ್ಯಕ್ಕೀಗ ಮಳೆಭೀತಿ ಎದುರಾಗಿದೆ. ಇದರ ನಡುವೆಯೂ ಟೀಂ ಇಂಡಿಯಾ ಸರಣಿ ಜಯದತ್ತ ಕಣ್ಣಿಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

India vs South Africa 3rd T20I India eye on series win in Bengaluru
Author
Bengaluru, First Published Sep 22, 2019, 11:24 AM IST

ಬೆಂಗಳೂರು[ಸೆ.22]: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಮುನ್ನ ಟಿ20 ಸರಣಿ ವಶ​ಪ​ಡಿ​ಸಿ​ಕೊ​ಳ್ಳುವ ಉತ್ಸಾ​ಹದ​ಲ್ಲಿ​ರುವ ಭಾರತ ತಂಡ, ಭಾನು​ವಾರ ಇಲ್ಲಿನ ಎಂ.ಚಿ​ನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯ​ಲಿರುವ 3ನೇ ಟಿ20 ಪಂದ್ಯ​ದಲ್ಲಿ ಗೆಲು​ವಿನ ಲೆಕ್ಕಾ​ಚಾರದಲ್ಲಿದೆ.

3 ಪಂದ್ಯ​ಗಳ ಟಿ20 ಸರ​ಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾದ ಬಳಿಕ, ಮೊಹಾ​ಲಿ​ಯಲ್ಲಿ ನಡೆ​ದಿದ್ದ 2ನೇ ಪಂದ್ಯ​ದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ 1-0 ಮುನ್ನಡೆ ಪಡೆ​ದು​ಕೊಂಡಿತ್ತು. ಸೋಲನ್ನೇ ಕಾಣದೆ ವೆಸ್ಟ್‌ಇಂಡೀಸ್‌ ಪ್ರವಾಸವನ್ನು ಮುಗಿಸಿಬಂದಿದ್ದ ವಿರಾಟ್‌ ಕೊಹ್ಲಿ ಪಡೆ, ಅ.2ರಿಂದ ದ.ಆ​ಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಗೆ ಅಜೇ​ಯವಾಗಿ ಕಾಲಿ​ಡಲು ಎದುರು ನೋಡು​ತ್ತಿದೆ.

#INDvSA ಬೆಂಗಳೂರು ಪಂದ್ಯ; ಮಳೆ ಬರುತ್ತಾ? ಬಿಸಿಲು ಇರುತ್ತಾ?

2020ರ ಟಿ20 ವಿಶ್ವ​ಕಪ್‌ಗೆ ಬಲಿ​ಷ್ಠ ತಂಡ ಕಟ್ಟುವ ಕಾರ್ಯ ಆರಂಭಿ​ಸಿ​ರುವ ಭಾರತ ತಂಡದ ಆಡ​ಳಿತ, ಹಲವು ಹೊಸ ಪ್ರಯೋಗಗಳಿಗೆ ಮುಂದಾ​ಗಿದೆ. ರಿಷಭ್‌ ಪಂತ್‌ಗೆ ಅಗ​ತ್ಯ​ಕ್ಕಿಂತ ಹೆಚ್ಚಿನ ಅವ​ಕಾಶಗಳನ್ನು ನೀಡ​ಲಾ​ಗು​ತ್ತಿದ್ದು, ದೆಹ​ಲಿಯ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ತಂಡದ ನಿರೀಕ್ಷೆ ಉಳಿ​ಸಿ​ಕೊ​ಳ್ಳು​ವಲ್ಲಿ ಸತತ ವೈಫಲ್ಯ ಕಾಣು​ತ್ತಿ​ದ್ದಾರೆ. ಬೆಂಗ​ಳೂರು ಪಂದ್ಯ ಪಂತ್‌ ಪಾಲಿಗೆ ಬಹು​ತೇಕ ಕೊನೆ ಅವ​ಕಾಶವಾಗ​ಲಿದೆ.

ಭಾರ​ತದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ, ಶಿಖರ್‌ ಧವನ್‌ ಹಾಗೂ ವಿರಾಟ್‌ ಕೊಹ್ಲಿ ಮೇಲೆ ಭಾರೀ ನಿರೀಕ್ಷೆ ಇದೆ. ಕೊಹ್ಲಿಯ ಐಪಿ​ಎಲ್‌ ತವರು ಮೈದಾ​ನ​ವಾ​ಗಿ​ರುವ ಕಾರಣ, ಸಹ​ಜ​ವಾ​ಗಿಯೇ ಬೆಂಗ​ಳೂರು ಅಭಿ​ಮಾ​ನಿ​ಗಳು ಭಾರತದ ನಾಯ​ಕ​ನಿಂದ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ ಮಾಡು​ತ್ತಿ​ದ್ದಾರೆ. ಶ್ರೇಯಸ್‌ ಅಯ್ಯರ್‌ ಭರ​ವಸೆ ಹೆಚ್ಚಿ​ಸಿದ್ದು, ಹಾರ್ದಿಕ್‌, ಕೃನಾಲ್‌ ಪಾಂಡ್ಯರ ಆಲ್ರೌಂಡ್‌ ಆಟ ಫಲಿ​ತಾಂಶದ ಮೇಲೆ ಪರಿ​ಣಾ​ಮ ಬೀರ​ಲಿದೆ.

INDvSA T20: ಬೆಂಗಳೂರು ಪಂದ್ಯಕ್ಕೆ ಬದಲಾವಣೆ; ಕನ್ನಡಿಗನಿಗೆ ಸ್ಥಾನ?

ಕೆಳ ಕ್ರಮಾಂಕ​ದ ಆಟ​ಗಾ​ರ​ರಿಂದಲೂ ಉಪ​ಯುಕ್ತ ರನ್‌ ಕೊಡುಗೆ ಎದುರು ನೋಡು​ತ್ತಿ​ರುವ ಭಾರತ, ಕುಲ್ದೀಪ್‌ ಯಾದವ್‌ ಹಾಗೂ ಯಜು​ವೇಂದ್ರ ಚಹಲ್‌ರನ್ನು ಸರ​ಣಿ​ಯಿಂದ ಹೊರ​ಗಿ​ಟ್ಟಿದೆ. ವೇಗಿ​ಗ​ಳಾದ ದೀಪಕ್‌ ಚಹಾರ್‌ ಹಾಗೂ ನವ್‌ದೀಪ್‌ ಸೈನಿ, ಆರಂಭಿಕ ಸ್ಪೆಲ್‌ಗಳಲ್ಲಿ ಮಾತ್ರ​ವ​ಲ್ಲದೆ ಡೆತ್‌ ಓವರ್‌ಗಳಲ್ಲೂ ರನ್‌ ನಿಯಂತ್ರಿ​ಸು​ವ ಸಾಮರ್ಥ್ಯ ಹೊಂದಿ​ದ್ದಾರೆ. ಚಿನ್ನ​ಸ್ವಾ​ಮಿ ಕ್ರೀಡಾಂಗ​ಣದ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೂ ನೆರವು ಸಿಗ​ಲಿದ್ದು, ಭಾರತ ಈ ಪಂದ್ಯಕ್ಕೆ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹಾರ್‌ರನ್ನು ಆಡಿ​ಸ​ಬ​ಹುದು.

ಡಿ ಕಾಕ್‌ ಮೇಲೆ ಒತ್ತಡ: ಅನು​ಭ​ವದ ಕೊರತೆ ಎದು​ರಿ​ಸು​ತ್ತಿ​ರುವ ದಕ್ಷಿಣ ಆಫ್ರಿಕಾ ತನ್ನ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಮೇಲೆ ಅವ​ಲಂಬಿತಗೊಂಡಿದೆ. ಕಳೆದ ಪಂದ್ಯ​ದಲ್ಲಿ ಅಂ.ರಾ.ಟಿ20ಗೆ ಪಾದಾ​ರ್ಪಣೆ ಮಾಡಿದ ತೆಂಬ ಬವುಮಾ ಭರ​ವಸೆ ಮೂಡಿ​ಸಿ​ದ್ದಾರೆ. ಆದರೆ ಹಿರಿಯ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್‌ ಹಾಗೂ ತಾರಾ ವೇಗಿ ಕಗಿಸೋ ರಬಾಡ ಜವಾ​ಬ್ದಾ​ರಿ​ಯುತ ಪ್ರದ​ರ್ಶನ ತೋರಿ​ದರೆ ಮಾತ್ರ, ದ.ಆ​ಫ್ರಿಕಾ ಸರ​ಣಿ​ಯಲ್ಲಿ 1-1ರಲ್ಲಿ ಸಮ​ಬಲ ಸಾಧಿ​ಸಲು ಸಾಧ್ಯ.

ಅಡ್ಡಿ​ಯಾ​ಗ​ಲಿ​ದೆಯೇ ಮಳೆ?

ಭಾನು​ವಾರ ಬೆಂಗ​ಳೂ​ರಲ್ಲಿ ಗಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂ​ಚನೆ ಇದೆ. ಈಗಾ​ಗಲೇ ಧರ್ಮ​ಶಾ​ಲಾ​ದಲ್ಲಿ ನಡೆ​ಯ​ಬೇ​ಕಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಪಂದ್ಯಕ್ಕೂ ಮಳೆ ಅಡ್ಡಿ​ಪ​ಡಿ​ಸಿ ಫಲಿ​ತಾಂಶ ಹೊರ​ಬೀ​ಳ​ದಿದ್ದರೆ ಭಾರತ ಸರಣಿ ವಶ​ಪ​ಡಿ​ಸಿ​ಕೊ​ಳ್ಳ​ಲಿದೆ.

ಪಿಚ್‌ ರಿಪೋರ್ಟ್‌

‘ಬ್ಯಾಟಿಂಗ್‌ ಸ್ವರ್ಗ’ ಎಂದೇ ಕರೆಯಲ್ಪಡುವ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ರನ್‌ ಹೊಳೆ ಹರಿಯಲಿದೆ. ಆದರೆ ಮಳೆ ಮುನ್ಸೂ​ಚನೆ ಇರುವ ಕಾರಣ, ಪಂದ್ಯ ನಡೆ​ಯುವ ಬಗ್ಗೆ ಅನು​ಮಾನವಿದೆ. ಮಳೆ ಕೆಲ ಗಂಟೆಗಳ ಕಾಲ ಬಿಡುವು ಕೊಟ್ಟರೂ ಸಬ್‌-ಏರ್‌ ವ್ಯವಸ್ಥೆ ಇರುವ ಕಾರಣ ಪಂದ್ಯ ನಡೆ​ಸಲು ಅವ​ಕಾಶ ಸಿಗ​ಲಿದೆ.

ಒಟ್ಟು ಮುಖಾ​ಮುಖಿ: 14

ಭಾರತ: 09

ದ.ಆ​ಫ್ರಿ​ಕಾ: 05

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಭಾರತ : ರೋಹಿತ್‌, ಧವನ್‌, ಕೊಹ್ಲಿ (ನಾಯಕ), ಶ್ರೇಯಸ್‌, ಪಂತ್‌, ಹಾರ್ದಿಕ್‌, ಜಡೇಜಾ, ಕೃನಾಲ್‌, ವಾಷಿಂಗ್ಟನ್‌/ರಾಹುಲ್‌ ಚಹಾರ್‌, ದೀಪಕ್‌, ಸೈನಿ

ದ.ಆಫ್ರಿಕಾ: ಡಿ ಕಾಕ್‌ (ನಾಯಕ), ಡುಸ್ಸೆನ್‌, ಬವುಮ, ಬ್ಯುರ​ನ್‌, ರೀಜಾ, ಮಿಲ್ಲರ್‌, ನೋರ್ಟೆ, ಫೆಲುಕ್ವಾಯೋ, ಪ್ರಿಟೋರಿಯಸ್‌, ರಬಾಡ, ಶಮ್ಸಿ.

ಪಂದ್ಯ ಆರಂಭ: ಸಂಜೆ 7ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

Follow Us:
Download App:
  • android
  • ios