ಆಕ್ಲೆಂಡ್(ಫೆ.07): ನ್ಯೂಜಿಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದೆ. ನಾಳೆ(ಫೆ.08)ರಂದು ನಡೆಯಲಿರುವ 2ನೇ ಪಂದ್ಯ ಟೀಂ ಇಂಡಿಯಾಗೆ ಪ್ರಮುಖವಾಗಿದೆ. ಈ ಪಂದ್ಯ ಗೆದ್ದು ಸರಣಿ ಉಳಿಸಿಕೊಳ್ಳಲು ರೋಹಿತ್ ಶರ್ಮಾ ಸೈನ್ಯ ತಯಾರಿ ಆರಂಭಿಸಿದೆ.

ಇದನ್ನೂ ಓದಿ: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ!

ಮೊದಲ ಪಂದ್ಯದಲ್ಲಿ ಭಾರತ 80  ರನ್ ಸೋಲು ಕಂಡಿತ್ತು. ಇದು ಟಿ20ಯಲ್ಲಿ ಭಾರತದ ಗರಿಷ್ಠ ಅಂತರದ ಸೋಲು ಅನ್ನೋ ಅಪಖ್ಯಾತಿಗೆ ಗುರಿಯಾಗಿತ್ತು. ಹೀಗಾಗಿ  2ನೇ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. 

ಇದನ್ನೂ ಓದಿ: IPL 2019: ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ RCB

ಸಂಭವನೀಯ ಟೀಂ ಇಂಡಿಯಾ:
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಶುಭ್‌ಮಾನ್ ಗಿಲ್, ರಿಷಬ್ ಪಂತ್, ಎಂ.ಎಸ್.ಧೋನಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚೆಹಾಲ್, ಖಲೀಲ್ ಅಹಮ್ಮದ್