ವೆಲ್ಲಿಂಗ್ಟನ್(ಫೆ.06): ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಇದೀಗ ಟಿ20 ಸರಣಿ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 80  ರನ್ ಭರ್ಜರಿ ಗೆಲುವು ದಾಖಲಿಸಿದೆ.

ಗೆಲುವಿಗಾಗಿ 220 ರನ್ ಬೃಹತ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ 18 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ 1 ರನ್ ಸಿಡಿಸಿ ಔಟಾದರು. ಶಿಖರ್ ಧವನ್ 3 ಸಿಕ್ಸರ್ ಹಾಗೂ 2 ಬೌಂಡರಿ ಮೂಲಕ 29  ರನ್ ಸಿಡಿಸಿ ಔಟಾದರು. ಅವರಸಕ್ಕೆ ಬಿದ್ದ ರಿಷಬ್ ಪಂತ್ 4, ವಿಜಯ್ ಶಂಕರ್ 27  ಹಾಗೂ ದಿನೇಶ್ ಕಾರ್ತಿಕ್ 5 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: ಶ್ರೀಲಂಕಾ ತಂಡಕ್ಕೆ ನೂತನ ನಾಯಕ ನೇಮಕ..!

ಎಂ.ಎಸ್.ಧೋನಿ ಏಕಾಂಗಿ ಹೋರಾಟ ನೀಡಿದರು. ಆದರೆ ಧೋನಿಗೆ ಉತ್ತಮ ಸಾಥ್ ಸಿಗಲಿಲ್ಲ. ಹಾರ್ದಿಕ್ ಪಾಂಡ್ಯ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರೆ, ಕ್ರುನಾಲ್ ಪಾಂಡ್ಯ 20  ರನ್‌ಗಳಿಸಿ ಔಟಾದರು. ಭುವನೇಶ್ವರ್ ಕುಮಾರ್ 1 ರನ್ ಸಿಡಿಸಿ ಔಟಾದರು. 

ಇದನ್ನೂ ಓದಿ: ಅಶ್ವಿನ್-ಕುಲ್ದೀಪ್ ಇಬ್ಬರಲ್ಲಿ ಕೋಚ್ ಶಾಸ್ತ್ರಿ ಮೊದಲ ಆಯ್ಕೆ ಯಾರು..?

ಎಂ.ಎಸ್.ಧೋನಿ 39 ರನ್ ಕಾಣಿಕೆ ನೀಡಿದರು. ಯಜುವೇಂದ್ರ ಚೆಹಾಲ್ ವಿಕೆಟ್ ಪತನದೊಂದಿಗೆ ಭಾರತ 19.2 ಓವರ್‌ಗಳಲ್ಲಿ 139 ರನ್‌ಗೆ ಆಲೌಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ 80 ರನ್ ಭರ್ಜರಿ ಗೆಲುವು ಸಾಧಿಸಿತು. 3 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿತು.

ಇದನ್ನೂ ಓದಿ:  ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ, ಆದರೆ...?

ಮೊದಲು ಬ್ಯಾಟಿಂಗ್  ಮಾಡಿದ್ದ ನ್ಯೂಜಿಲೆಂಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಟಿಮ್ ಸೈಫರ್ಟ್ 84, ಕೊಲಿನ್ ಮುನ್ರೋ 34, ಕೇನ್ ವಿಲಿಯಮ್ಸನ್ 34, ರಾಸ್ ಟೇಲರ್ 23, ಸ್ಕಾಟ್ ಕಗ್ಲಿಜೆನ್ 20 ರನ್ ಕಾಣಿಕೆ ನೀಡಿದರು. ಈ ಮೂಲಕ ನ್ಯೂಜಿಲೆಂಡ್ 6  ವಿಕೆಟ್ ನಷ್ಟಕ್ಕೆ 219 ರನ್ ಸಿಡಿಸಿತು.