ಕೊಲಂಬೊ(ಫೆ.06): ಶ್ರೀಲಂಕಾ ಕ್ರಿಕೆಟ್‌ ತಂಡದಲ್ಲಿ ಮತ್ತೆ ನಾಯಕತ್ವ ಬದಲಾವಣೆಯಾಗಿದೆ. ಫೆ.13 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಲಂಕಾ ತಂಡವನ್ನು ಮಂಗಳವಾರ ಪ್ರಕಟಿಸಲಾಯಿತು. 

ಪ್ಯಾಟ್ ಕಮ್ಮಿನ್ಸ್ ಬೌಲಿಂಗ್’ನಲ್ಲಿ ನೆಲಕ್ಕುರುಳಿದ ಲಂಕಾ ಬ್ಯಾಟ್ಸ್’ಮನ್..!

ಆಸ್ಪ್ರೇಲಿಯಾ ಪ್ರವಾಸದಲ್ಲಿ ತಂಡ ಮುನ್ನಡೆಸಿದ್ದ ದಿನೇಶ್‌ ಚಾಂಡಿಮಲ್‌ರನ್ನು ತಂಡದಿಂದ ಕೈಬಿಟ್ಟು, ಆರಂಭಿಕ ಆಟಗಾರ ದಿಮುತ್‌ ಕರುಣರತ್ನೆಗೆ ನಾಯಕತ್ವ ನೀಡಲಾಗಿದೆ. ಚಾಂಡಿಮಲ್‌ಗೆ ದೇಸಿ ಕ್ರಿಕೆಟ್‌ಗೆ ಮರಳುವಂತೆ ಸೂಚಿಸಲಾಗಿದೆ. ಕಳೆದ ಒಂದೆರಡು ವರ್ಷದಲ್ಲಿ ಲಂಕಾ ತನ್ನ ಟೆಸ್ಟ್‌ ತಂಡಕ್ಕೆ ನಾಲ್ವರು ನಾಯಕರನ್ನು ಬದಲಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ 2-0 ಅಂತರದಲ್ಲಿ ಸೋಲುಂಡು ಮುಖಭಂಗ ಅನುಭವಿಸಿತ್ತು.