ಬೇ ಓವಲ್(ಜ.29): ನ್ಯೂಜಿಲೆಂಡ್ ವಿರುದ್ಧದ ಆರಂಭಿಕ 3 ಏಕದಿನ ಪಂದ್ಯ ಗೆದ್ದ ನಾಯಕ ವಿರಾಟ್ ಕೊಹ್ಲಿ ಇನ್ನೂ 2 ಪಂದ್ಯ ಬಾಕಿ ಇರುವಂತೆ ಸರಣಿ ಗೆಲುವು ಸಾಧಿಸಿದ್ದಾರೆ. ಇನ್ನುಳಿದ 2 ಏಕದಿನ ಹಾಗೂ 3 ಟಿ20 ಪಂದ್ಯದಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಇದೀಗ ವಿಶ್ರಾಂತಿಯಲ್ಲಿದ್ದಾರೆ.

ಇದನ್ನೂ ಓದಿ: ಯುವರ್ ಇಂಗ್ಲೀಷ್ ಬಹುತ್ ಅಚ್ಚಾ- ಶಮಿ ಶ್ಲಾಘಿಸಿದ ಸೈಮನ್ !

ಸತತ ಕ್ರಿಕೆಟ್‌ನಿಂದ ಬ್ಯುಸಿಯಾಗಿದ್ದ ವಿರಾಟ್ ಕೊಹ್ಲಿ ಇದೀಗ ಪತ್ನಿ ಅನುಷ್ಕಾ ಶರ್ಮಾ ಜೊತೆ ಜಾಲಿ ಟ್ರಿಪ್‌ನಲ್ಲಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಜೋಡಿ ಪ್ರೈವೇಟ್ ಜೆಟ್‌ನಿಂದ ಇಳಿದು ಬರುತ್ತಿರುವ ಫೋಟೋವನ್ನ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಇತಿಹಾಸ ಬರೆದ ನೇಪಾಳ!

ದೂರ ಪ್ರಯಾಣ ಎಂದು ಬರೆದುಕೊಂಡಿರುವ ಕೊಹ್ಲಿ, ಜಾಲಿ ಟ್ರಿಪ್ ಸೂಚನೆ ನೀಡಿದ್ದಾರೆ. ಆದರೆ ಕೊಹ್ಲಿ ಹಾಗೂ  ಅನುಷ್ಕಾ ಶರ್ಮಾ ಜಾಲಿ ಟ್ರಿಪ್ ಯಾವ ಕಡೆಗೆ  ಅನ್ನೋದನ್ನ ಬಹಿರಂಗ ಪಡಿಸಿಲ್ಲ.  ನ್ಯೂಜಿಲೆಂಡ್ ವಿರುದ್ದದ 3-0 ಅಂತರದಲ್ಲಿ ಸರಣಿ ಗೆದ್ದ ಕೊಹ್ಲಿ, ನ್ಯೂಜಿಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದ 2ನೇ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.