ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟಿ20 ಪಂದ್ಯದ ಕುತೂಹಲ ಇಮ್ಮಡಿಯಾಗಿದೆ. ಆರಂಭದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಕಿವೀಸ್ ಇದೀಗ ಸ್ಪರ್ಧಾತ್ಮಕ ಮೊತ್ತ ಸಿಡಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.
ಆಕ್ಲೆಂಡ್(ಫೆ.08): ಭಾರತ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ ನ್ಯೂಜಿಲೆಂಡ್ ತಂಡಕ್ಕೆ ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ ಹಾಗೂ ರಾಸ್ ಟೇಲರ್ ನೆರವಿನಿಂದ ಅಬ್ಬರಿಸಿದೆ. ಹೀಗಾಗಿ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕಿವೀಸ್ 158 ರನ್ ಸಿಡಿಸಿದೆ. ಈ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ 159 ರನ್ ಟಾರ್ಗೆಟ್ ನೀಡಿದೆ.
ಇದನ್ನೂ ಓದಿ: ಮಾಜಿ ನಾಯಕ ಸೌರವ್ ಗಂಗೂಲಿ ಮನೆಗೆ ಹೊಸ ಅತಿಥಿ ಆಗಮನ!!
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ತಂಡಕ್ಕೆ ಕ್ರುನಾಲ್ ಪಾಂಡ್ಯ ಶಾಕ್ ನೀಡಿದರು. ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಟಿಮ್ ಸೈಫರ್ಟ್ 2ನೇ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ವಿಕೆಟ್ ಕೀಪರ್ ಎಂ.ಎಸ್.ಧೋನಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಮೊದಲ ವಿಕೆಟ್ ಪತನದ ಬಳಿಕ ಕ್ರುನಾಲ್ ಪಾಂಡ್ಯ ಮೋಡಿ ಮಾಡಿದರು.
ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆಗೆ ಸೆಹ್ವಾಗ್ ಹರಿಯಾಣದಿಂದ ಸ್ಪರ್ಧೆ?
ಕಾಲಿನ್ ಮುನ್ರೊ, ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡರ್ಲಿ ಮಿಚೆಲ್, ಕ್ರುನಾಲ್‌ಗೆ ವಿಕೆಟ್ ಒಪ್ಪಿಸಿದರು. 50 ರನ್‌ಗೆ 4 ವಿಕೆಟ್ ಕಳೆದುಕೊಂಡ ಕಿವೀಸ್ ಸಂಕಷ್ಟಕ್ಕೆ ಸಿಲುಕಿತು. ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ ಹಾಗೂ ರಾಸ್ ಟೇಲರ್ ಕಿವೀಸ್ ತಂಡಕ್ಕೆ ಆಸರೆಯಾದರು. ಗ್ರ್ಯಾಂಡ್‌ಹೊಮ್ಮೆ 28 ಎಸೆತದಲ್ಲಿ 50 ರನ್ ಸಿಡಿಸಿದರು.
ರಾಸ್ ಟೇಲರ್ 42 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು. ಭಾರತದ ಪರ ಕ್ರುನಾಲ್ ಪಾಂಡ್ಯ 3 ಹಾಗೂ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ತಲಾ 1ವಿಕೆಟ್ ಪಡೆದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 8, 2019, 1:16 PM IST