ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. 3ನೇ ಹಾಗೂ ಅಂತಿಮ ದಿನದಲ್ಲಿ ವಿರಾಟ್ ಕೊಹ್ಲಿ ಸೈನ್ಯದ ಪ್ರದರ್ಶನ ಹೇಗಿದೆ? ಇಲ್ಲಿದೆ ವಿವರ.
ಚೆಲ್ಮ್ಸ್‌ಫೋರ್ಡ್(ಜು.27): ಟೀಂ ಇಂಡಿಯಾ ಹಾಗೂ ಎಸೆಕ್ಸ್ ಕೌಂಟಿ ತಂಡದ ನಡುವಿನ ಅಭ್ಯಾಸ ಪಂದ್ಯ ಅಂತಿಮ ಘಟ್ಟ ತಲುಪಿದೆ. ತೃತೀಯ ಹಾಗೂ ಅಂತಿಮ ದಿನದಾಟದಲ್ಲಿ ಎಸೆಕ್ಸ್ ಆಲೌಟ್ ಭೀತಿ ಎದುರಿಸುತ್ತಿದೆ.
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 395 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಎಸೆಕ್ಸ್ ಭೋಜನ ವಿರಾಮದ ವೇಳೆ 8 ವಿಕೆಟ್ ನಷ್ಟಕ್ಕೆ 345 ರನ್ ಸಿಡಿಸಿದೆ. ಈ ಮೂಲಕ 50 ರನ್‌ಗಳ ಹಿನ್ನಡೆಯಲ್ಲಿದೆ.
ದ್ವಿತೀಯ ಹಾಗೂ ತೃತೀಯ ದಿನಟಾದಲ್ಲಿ ಟೀಂ ಇಂಡಿಯಾ ವೇಗಿಗಳು ಅಬ್ಬರಿಸಿದ್ದಾರೆ. ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ದಾಳಿಗೆ ಆಂಗ್ಲರು ತತ್ತರಿಸಿದ್ದಾರೆ. ಉಮೇಶ್ ಯಾದವ್ 4 , ಇಶಾಂತ್ ಶರ್ಮಾ 3 ಹಾಗೂ ಶಾರ್ದೂಲ್ ಠಾಕೂರ್ 1 ವಿಕೆಟ್ ಕಬಳಿಸಿದ್ದಾರೆ.
ಇದನ್ನು ಓದಿ: ವೈರಲ್ ಆಗುತ್ತಿದೆ ರಸ್ಲರ್ ಗೀತಾ ಪೋಗತ್ ಪತಿ ಡ್ಯಾನ್ಸ್ ವೀಡಿಯೋ !
ದ್ವಿತೀಯ ದಿನ ಇಂಜುರಿಯಾಗಿದ್ದ ಆರ್ ಅಶ್ವಿನ್ ಬೌಲಿಂಗ್ ಮಾಡಿರಲ್ಲ. ಅಂತಿಮ ದಿನದಾಟದಲ್ಲಿ ಅಶ್ವಿನ್ 5 ಓವರ್ ಬೌಲಿಂಗ್ ಮಾಡಿದ್ದಾರೆ. ಆದರೆ ಯಾವುದೇ ವಿಕೆಟ್ ಕಬಳಿಸಿಲ್ಲ. ಇನ್ನು ರವೀಂದ್ರ ಜಡೇಜಾ ಹಾಗೂ ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ವಿಕೆಟ್ ಬಿದ್ದಿಲ್ಲ.
ಇದನ್ನು ಓದಿ: ಆಸ್ಟ್ರೇಲಿಯಾ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!
