ಟೀಂ ಇಂಡಿಯಾಗೆ ಬಿಗ್ ಶಾಕ್! ಅರ್ಧಶತಕ ಸಿಡಿಸಿ ಕೊಹ್ಲಿ ಔಟ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 4:16 PM IST
India vs england test virat kohli half century put smile on Indian fans
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದೆ. 4ನೇ ದಿನದಾಟದ ಆರಂಭದಲ್ಲೇ ಭಾರತ ವಿಕೆಟ್ ಕಳೆದುಕೊಂಡಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಎಡ್ಜ್‌ಬಾಸ್ಟನ್(ಆ.04): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ.  ಗೆಲುವಿಗಾಗಿ 194 ರನ್ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾ 3ನೇ ದಿನದಾಟದ ಅಂತ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 110 ರನ್ ಸಿಡಿಸಿತ್ತು.

4ನೇ ದಿನದಾಟ ಆರಂಭದಲ್ಲೇ ಟೀಂ ಇಂಡಿಯಾ ದಿನೇಶ್ ಕಾರ್ತಿಕ್ ವಿಕೆಟ್ ಪತನಗೊಂಡಿತು. ಇಂದು 2 ರನ್ ಗಳಿಸಿದ ಕಾರ್ತಿಕ್ 20 ರನ್‌ಗೆ ಆಟ ಅಂತ್ಯಗೊಳಿಸಿದರು.  ಹೀಗಾಗಿ ಟೀಂ ಇಂಡಿಯಾ ಪಾಳಯದ ಆತಂಕ ಹೆಚ್ಚಾಯಿತು.  

ಆರಂಭದಲ್ಲೇ ವಿಕೆಟ್ ಪತನವಾದರೂ, ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ತಂಡದ ಜವಾಬ್ದಾರಿ ಹೊತ್ತು ದಿಟ್ಟ ಹೋರಾಟ ನೀಡುತ್ತಿರುವ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ 17ನೇ ಅರ್ಧಶತ ಸಿಡಿಸಿದ್ದಾರೆ. ಈ ಮೂಲಕ ಭಾರತ ಗೆಲುವಿನ ಆಸೆಗೆ ಮತ್ತಷ್ಟು ಜೀವ ತುಂಬಿದ್ದಾರೆ.  ಭಾರತ 6 ವಿಕೆಟ್ ನಷ್ಟಕ್ಕೆ 141 ರನ್ ಸಿಡಿಸಿದೆ. ಗೆಲುವಿಗಾಗಿ ಇನ್ನು 53 ರನ್ ಬೇಕಿದೆ.

loader