ಭಾರತ-ಇಂಗ್ಲೆಂಡ್ ಟಿ20: ಅರ್ಧಶತಕ ಸಿಡಿಸಿ ಆಸರೆಯಾದ ಕೆಎಲ್ ರಾಹುಲ್

India vs England T20: Rahul turns the heat on England
Highlights

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆಲುವಿಗಾಗಿ 160 ರನ್ ಗುರಿ ಪಡೆದಿದೆ. ಈ ಗುರಿ ಬೆನ್ನಟ್ಟಲು ಕಣಕ್ಕಿಳಿದ ಭಾರತ ಟೀಂ ಇಂಡಿಯಾ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದೆ. ಸದ್ಯ ತಂಡಕ್ಕೆ ಆಸರೆಯಾಗಿರೋದು ಯಾರು? ಇಲ್ಲಿದೆ ಅಪ್‌ಡೇಟ್ಸ್

ಓಲ್ಡ್ ಟ್ರಾಫೋರ್ಡ್(ಜು.04): ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 160 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾಗೆ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ  ಆಸರೆಯಾಗಿದ್ದಾರೆ.

ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿದ ತಂಡಕ್ಕೆ ಕೆಎಲ್ ರಾಹುಲ್ ಸ್ಫೋಟಕ ಇನ್ನಿಂಗ್ಸ್ ವರದಾನವಾಯಿತು.  27 ಎಸೆತದಲ್ಲಿ ರಾಹುಲ್ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿಂದ ಆಕರ್ಷಕ ಅರ್ಧಶತಕ ಸಿಡಿಸಿದರು. 

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿದೆ. ಭಾರತದ ಪರ ಕುಲದೀಪ್ ಯಾದವ್ 5 ವಿಕೆಟ್ ಕಬಳಿಸಿ ಮಿಂಚಿದರು.

ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಟಿ20: ಟೀಂ ಇಂಡಿಯಾ ಗೆಲುವಿಗೆ 160 ರನ್ ಟಾರ್ಗೆಟ್
 

loader