ಒಲ್ಡ್ ಟ್ರಾಫೋರ್ಡ್(ಜು.03): ಮೊದಲ ಟಿ20 ಪಂದ್ಯದಲ್ಲಿ159 ರನ್‌ಗಳಿಗೆ ಆಂಗ್ಲರನ್ನ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಈ ಮೂಲಕ ಭಾರತದ ಗೆಲುವಿಗೆ 160 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಆರಂಭದಲ್ಲೇ ಅಬ್ಬರಿಸಿತು. ಆದರೆ ಜೇಸನ್ ರಾಯ್ 30 ರನ್ ಸಿಡಿಸಿ, ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್ ಪತನದ ಬಳಿಕ ಇಂಗ್ಲೆಂಡ್ ಚೇತರಿಸಿಕೊಂಡಿತು. ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ 45 ರನ್‌ಗಳ ಜೊತೆಯಾಟ ನೀಡಿದರು.

ಅಲೆಕ್ಸ್ ಹೇಲ್ಸ್ ಕೇವಲ 8 ರನ್ ಸಿಡಿಸಿ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಇಯಾನ್ ಮಾರ್ಗನ್ 7 ರನ್ ಸಿಡಿಸಿ ಔಟಾದರು. ಜಾನಿ ಬೈರಿಸ್ಟೋ ಬಂದ ಹಾಗೆ ಸ್ಟಂಪ್ ಔಟ್ ಆದರು. ಇನ್ನು ಜೋ ರೂಟ್ ಕೂಡ ಕುಲದೀಪ್ ಮೋಡಿಗೆ ಬಲಿಯಾದರು. 

ಮೊಯಿನ್ ಆಲಿ 6 ರನ್‌ಗಳಿಸಿ ಹಾರ್ದಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು. ಜೋಸ್ ಬಟ್ಲರ್ ಹೋರಾಟ 69 ರನ್‌ಗಳಿಗೆ ಅಂತ್ಯವಾಯಿತು.  ಇಂಗ್ಲೆಂಡ್ ನಾಡಿನಲ್ಲಿ ಸ್ಪಿನ್ ಜಾದು ಮಾಡಿದ ಕುಲದೀಪ್ ಯಾದವ್ ಪ್ರಮುಖ 5 ವಿಕೆಟ್ ಕಬಳಿಸಿದರು.  ಕ್ರಿಸ್ ಜೋರ್ಡಾನ್ ಡಕೌಟ್ ಆದರು. ಡೇವಿಡ್ ವಿಲೆ ಸಿಡಿಸಿದ ಅಜೇಯ 29 ರನ್‌ಗಳ ನೆರವಿನಿಂದ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿತು. ಈ ಮೂಲಕ ಭಾರತದ ಗೆಲುವಿಗೆ 160 ರನ್ ಟಾರ್ಗೆಟ್ ನೀಡಿದೆ.