ಟಿ20 ಶತಕವನ್ನು ಈ ಮೃತ ಪ್ರಾಣಿಗೆ ಅರ್ಪಿಸಿದ ರೋಹಿತ್‌..!

India vs England Rohit Sharma Dedicates Century To His Fallen Friend Sudan
Highlights

ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್’ಸನ್ ಮಾರ್ಚ್ 20ರಂದು ಟ್ವಿಟರ್ ಮೂಲಕ ಸೂಡನ್ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದರು. 

ಬ್ರಿಸ್ಟಲ್‌[ಜು.10]: ಇಂಗ್ಲೆಂಡ್‌ ವಿರುದ್ಧ ಭಾನುವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಸಿಡಿಸಿದ ಶತಕವನ್ನು ರೋಹಿತ್‌ ಶರ್ಮಾ, ಇತ್ತೀಚೆಗಷ್ಟೇ ಅಸುನೀಗಿದ ಘೇಂಡಾಮೃಗ ಸೂಡನ್‌ಗೆ ಅರ್ಪಿಸಿದ್ದಾರೆ. ಟ್ವೀಟರ್‌ನಲ್ಲಿ ರೋಹಿತ್‌ ಈ ವಿಷಯ ತಿಳಿಸಿದ್ದಾರೆ. ಹಿಟ್’ಮ್ಯಾನ್ ರೋಹಿತ್ ಅವರ ಈ ನಡೆ ಪ್ರಾಣಿ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನು ಓದಿರೋಹಿತ್ ಶತಕ; ಟೀಂ ಇಂಡಿಯಾಗೆ ವಿಜಯದ ತಿಲಕ

ಭೂಮಿ ಮೇಲಿದ್ದ ಕೊನೆಯ ಗಂಡು ಬಿಳಿ ಘೇಂಡಾಮೃಗ ಸೂಡನ್‌ ಮಾರ್ಚ್ ತಿಂಗಳಲ್ಲಿ ಕೀನ್ಯಾದಲ್ಲಿ ಮೃತಪಟ್ಟಿತ್ತು. ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದಾಗ ರೋಹಿತ್‌ ಸೂಡನ್‌ ಇದ್ದ ಸ್ಥಳಕ್ಕೆ ಭೇಟಿ ನೀಡಿ ಅದರೊಂದಿಗೆ ರೋಹಿತ್ ಕಾಲ ಕಳೆದಿದ್ದರು.

ಇದನ್ನು ಓದಿ: ಆಂಗ್ಲರನ್ನು ಬಗ್ಗುಬಡಿದ ಟೀಂ ಇಂಡಿಯಾ; ಟ್ವಿಟರ್ ರಿಯಾಕ್ಷನ್ ಅಂತೂ ಅದ್ಭುತ..!

ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್’ಸನ್ ಮಾರ್ಚ್ 20ರಂದು ಟ್ವಿಟರ್ ಮೂಲಕ ಸೂಡನ್ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದರು. 

loader