Asianet Suvarna News Asianet Suvarna News

ರೋಹಿತ್ ಶತಕ; ಟೀಂ ಇಂಡಿಯಾಗೆ ವಿಜಯದ ತಿಲಕ

ಇಂಗ್ಲೆಂಡ್ ನೀಡಿದ್ದ 199 ರನ್’ಗಳನ್ನು ಅನಾಯಾಸವಾಗಿ ಮೆಟ್ಟಿನಿಂತ ಭಾರತ ಇನ್ನೊಂದು ಓವರ್ ಬಾಕಿಯಿರುವಂತೆಯೇ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಮೂರನೇ ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ನಿರ್ಮಿಸಿದರು.

Ind Vs Eng T20I Rohit brilliant century leads India to victory

ಬ್ರಿಸ್ಟಾಲ್[ಜು.08]: ಹಿಟ್’ಮ್ಯಾನ್ ರೋಹಿತ್ ಶರ್ಮಾ ಬಾರಿಸಿದ ಸಿಡಿಲಬ್ಬರದ ಶತಕ ಹಾಗೂ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಭಾರತ ಜಯಿಸುವುದರೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಫಲಪ್ರದವನ್ನಾಗಿಸಿಕೊಂಡಿದೆ.

ಇಂಗ್ಲೆಂಡ್ ನೀಡಿದ್ದ 199 ರನ್’ಗಳನ್ನು ಅನಾಯಾಸವಾಗಿ ಮೆಟ್ಟಿನಿಂತ ಭಾರತ ಇನ್ನೊಂದು ಓವರ್ ಬಾಕಿಯಿರುವಂತೆಯೇ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಮೂರನೇ ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ನಿರ್ಮಿಸಿದರು. ಮೂರನೇ ಓವರ್’ನ ಮೊದಲ ಎಸೆತದಲ್ಲೇ ಧವನ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆ ಬಳಿಕ ಜತೆಯಾದ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ 41 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರಾಹುಲ್ 19 ರನ್ ಬಾರಿಸಿ ಜೋರ್ಡನ್ ಹಿಡಿದ ಅದ್ಭುತ ಕ್ಯಾಚ್’ಗೆ ಪೆವಿಲಿಯನ್ ಸೇರಿದರು. ಇದಾದ ನಂತರ ಸ್ಫೋಟಕ ಜತೆಯಾಟವಾಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 89 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು. ಇದೇ ವೇಳೆ ರೋಹಿತ್ ಎರಡು ಸಾವಿರ ರನ್ ಪೂರೈಸಿದ ಸಾಧನೆಯನ್ನು ಮಾಡಿದರು. ಕೊಹ್ಲಿ 29 ಎಸೆತಗಳಲ್ಲಿ 43 ರನ್ ಸಿಡಿಸಿದರೆ, ರೋಹಿತ್ 56 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್’ಗಳ ನೆರವಿನಿಂದ ಅಜೇಯ 100 ರನ್ ಬಾರಿಸಿದರು. ಕೊನೆಯಲ್ಲಿ ಆರ್ಭಟಿಸಿದ ಪಾಂಡ್ಯ 14 ಎಸೆತಗಳಲ್ಲಿ 33 ರನ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಜೇಸನ್ ರಾಯ್[67] ಬಾರಿಸಿದ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 198 ರನ್ ಬಾರಿಸಿತ್ತು.

Follow Us:
Download App:
  • android
  • ios