1ನೇ ಮಹಾಯುದ್ಧದಲ್ಲಿ ಮಡಿದ ಭಾರತೀಯರ ಯೋಧರ ಸ್ಮರಿಸಿದ ಕೊಹ್ಲಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 10:22 AM IST
India vs England Indian World War 1 soldiers remembered at The Oval
Highlights

ಮೊದಲ ವಿಶ್ವಯುದ್ದ ಪೂರ್ಣಗೊಂಡು 100 ವರ್ಷ ಕಳೆದಿದೆ. ಮಹಾಯುದ್ಧದಲ್ಲಿ ಬ್ರಿಟೀಷರ ಪರ ಹೋರಾಡಿ ಮಡಿದ ಭಾರತೀಯರ ಯೋಧರನ್ನ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡ ಸ್ಮರಿಸಿತು. ಇಲ್ಲಿದೆ ಭಾರತದ ತ್ಯಾಗ ಸ್ಮರಣೆ.

ಲಂಡನ್(ಸೆ.09) : ಮೊದಲ ವಿಶ್ವಯುದ್ಧದಲ್ಲಿ ಮಡಿದ ಭಾರತೀಯ ಯೋಧರ ತ್ಯಾಗ ಹಾಗೂ ಬಲಿದಾನವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ನಾಯಕ ಜೋ ರೂಟ್ ಸ್ಮರಿಸಿದರು.

ಮೊದಲ ಮಹಾಯುದ್ಧ ನಡೆದ ಸಂದರ್ಭದಲ್ಲಿ ಭಾರತ, ಬ್ರಿಟಿಷರ ವಸಾಹತುವಿಗೆ ಒಳಪಟ್ಟಿತ್ತು. ಆದಕಾರಣ ಅನಿವಾರ್ಯವಾಗಿ ಭಾರತೀಯ ಯೋಧರು ಯುದ್ಧದಲ್ಲಿ
ಬ್ರಿಟಿಷರ ಪರ ಹೋರಾಟ ನಡೆಸಿದ್ದರು. ಈ ವೇಳೆ ಅನೇಕರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದರು. 

ಇದೀಗ ಮೊದಲ ಮಹಾಯುದ್ಧ ಅಂತ್ಯದ ಶತಮಾನೋತ್ಸವ ಆಚರಣೆ ನಿಮಿತ್ತ ಖಾದಿಯಿಂದ ಸಿದ್ಧ ಪಡಿಸಿದ ಕೆಂಪು ವರ್ಣದ ಪೊಪ್ಪಿ (ಹೂವು)ಯನ್ನು, 5ನೇ ಟೆಸ್ಟ್‌ನ 2ನೇ ದಿನವಾದ ಶನಿವಾರ ಪಂದ್ಯ ಆರಂಭಕ್ಕೂ ಮುನ್ನ ತಮ್ಮ ಬ್ಲೆಸರ್‌ಗೆ ಧರಿಸುವ
ಮೂಲಕ ಯೋಧರನ್ನು ಸ್ಮರಿಸಿದರು. 

ಭಾರತೀಯ ಮೂಲದ ಜಿತೇಶ್ ಗಾಧಿಯಾ ಹಾಗೂ ರಾಯಲ್ ಬ್ರಿಟಿಷ್ ಲೀಜನ್ ಚಾರಿಟಿ ಈ ಹೂವನ್ನು ಸಿದ್ಧ ಪಡಿಸಿತ್ತು. ಈ ಪೊಪ್ಪಿ ಹೂವು, ಯುದ್ಧದಲ್ಲಿ ಮಡಿದವರ ಸಾಂಪ್ರದಾಯಿಕ ಚಿಹ್ನೆಯಾಗಿದೆ.

loader