ಪರ್ತ್(ಡಿ.18): ಆಸ್ಟ್ರೇಲಿಯಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲು ನಿರಾಸೆ ತಂದಿದೆ. ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ದಿಗ್ಗಜ ಕ್ರಿಕೆಟಿಗರು ಟೀಂ ಇಂಡಿಯಾಗೆ ಸಲಹೆ ನೀಡಿದ್ದಾರೆ.  ಇಷ್ಟೇ ಅಲ್ಲ ಸೋಲಿಗೆ ಕಾರಣಗಳನ್ನೂ ನೀಡಿದ್ದಾರೆ.

ಇದನ್ನೂ ಓದಿ: ಭಾರತ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ!

ನಾಲ್ವರು ಬೌಲಿಂಗ್ ಆಡಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಕಡೆಗೂ ಹೆಚ್ಚು ಗಮನಹರಿಸಬೇಕಿತ್ತು. 8,9,10ನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಹೆಚ್ಚು ರನ್ ಗಳಿಸಿದೆ. ಆದರೆ ಭಾರತ ರನ್‌ಗಳಿಸಲು ತಿಣುಕಾಡುತ್ತಿದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಲ್ ಹರಾಜಿಗೂ ಮೊದಲೇ ಮುಂಬೈ ಪಾಲಾದ ಜಹೀರ್ ಖಾನ್!

ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷಣ್ಮ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರೂ ಟೀಂ ಇಂಡಿಯಾಗೆ ಸಲಹೆ  ನೀಡಿದ್ದಾರೆ. ಇಲ್ಲಿದೆ ದಿಗ್ಗಜ ಕ್ರಿಕೆಟಿಗರ ಟ್ವೀಟ್.