ಮುಂಬೈ(ಡಿ.17): ಆಸ್ಟ್ರೇಲಿಯಾ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಪೃಥ್ವಿ ಶಾ ಇಂಜುರಿಯಿಂದ ಟೂರ್ನಿಯಿಂದ ಹೊರಬಿದ್ದರೆ, ರಣಜಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಇಂಜುರಿಗೆ ತುತ್ತಾದ ಪಾಂಡ್ಯ ಕಳೆದ 3 ತಿಂಗಳಿನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಇದೀಗ ಬರೋಡ ಪರ ರಣಜಿ ಪಂದ್ಯ ಆಡೋ ಮೂಲಕ ಮತ್ತ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.

 

 

ಡಿಸೆಂಬರ್ 18 ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದ್ದು, ಸುವರ್ಣನ್ಯೂಸ್.ಕಾಂ ವಿನೂತನವಾಗಿ ಹರಾಜಿನ ಪ್ರತಿಕ್ಷಣದ ಮಾಹಿತಿಯನ್ನ ನಿಮ್ಮ ಮುಂದಿಡಲಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ವಿರುದ್ಧ ಗರಂ ಆದ ಬಾಲಿವುಡ್ ನಟ!

2ನೇ ಟೆಸ್ಟ್ ಪಂದ್ಯ ಅಂತಿಮ ಹಂತ ತಲುಪಿದೆ. ಇದರ ಬೆನ್ನಲ್ಲೇ, ಎಂ.ಎಸ್.ಕೆ ಪ್ರಸಾದ್ ನೇೃತ್ವದ ಆಯ್ಕೆ ಸಮಿತಿ 3 ಮತ್ತು 4ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನ ಪ್ರಕಟಿಸಲಾಗಿದೆ.  ಕಳಪೆ ಪ್ರದರ್ಶನ ನೀಡಿರುವ ಆರಂಭಿಕರಾದ ಮುರಳಿ ವಿಜಯ್ ಹಾಗೂ ಕೆಎಲ್ ರಾಹುಲ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: #IPL2019: ಹರಾಜಿಗೂ ಮುನ್ನ ಹೀಗಿದೆ ನೋಡಿ ರಾಜಸ್ಥಾನ ರಾಯಲ್ಸ್ ಪಡೆ

ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರೋಹಿತ್ ಶರ್ಮಾ, ರಿಷಬ್ ಪಂತ್, ಪಾರ್ಥೀವ್ ಪಟೇಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್

ಇದನ್ನೂ ಓದಿ: ವಿರಾಟ್ ಕೊಹ್ಲಿ ವಿರುದ್ಧ ಗರಂ ಆದ ಬಾಲಿವುಡ್ ನಟ!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಿಂದ ಡಿಸೆಂಬರ್ 26 ರಿಂದ ಆರಂಭಗೊಳ್ಳಲಿದೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಲಿದೆ.