ಬೆಂಗಳೂರು[ಡಿ.17]: ಐಪಿಎಲ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್, ಮತ್ತೊಮ್ಮೆ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದೆ. 11ನೇ ಆವೃತ್ತಿಯ ಪ್ಲೇ ಆಪ್ ಹಂತ ಪ್ರವೇಶಿಸಿ ಕಡೇ ಕ್ಷಣದಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಲು ವಿಫಲವಾಗಿದ್ದ ಅಜಿಂಕ್ಯ ರಹಾನೆ ಪಡೆ ಈ ಬಾರಿ ಹರಾಜಿನಲ್ಲಿ ತಾರಾ ಆಟಗಾರರನ್ನು ಖರೀದಿಸಲು ಮುಂದಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಐಪಿಎಲ್ 2019: ಹರಾಜಿಗೂ ಮುನ್ನ ಆರ್‌ಸಿಬಿ ತಂಡ ಹೀಗಿದೆ!

ಸ್ಫೋಟಕ ಬ್ಯಾಟ್ಸ್’ಮನ್ ಜೋಸ್ ಬಟ್ಲರ್, ಕನ್ನಡಿಗರಾದ ಕೆ. ಗೌತಮ್, ಶ್ರೇಯಸ್ ಗೋಪಾಲ್, ಸ್ಟುವರ್ಟ್ ಬಿನ್ನಿ ಅವರಂತ ಆಲ್ರೌಂಡರ್’ಗಳನ್ನು ಉಳಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡ ಬಹುತೇಕ ವೇಗದ ಬೌಲರ್’ಗಳನ್ನು ಖರೀದಿಸುವ ಸಾಧ್ಯತೆಯಿದೆ. ಡಿಸೆಂಬರ್ 18ರಂದು ಜೈಪುರಲ್ಲಿ ಆಟಗಾರರ ಹರಾಜು ನಡೆಯಲಿದ್ದು, 346 ಆಟಗಾರರು ಹರಾಜಿನಲ್ಲಿ ಲಭ್ಯವಿದ್ದಾರೆ. ಇದರಲ್ಲಿ 8 ಪ್ರಾಂಚೈಸಿಗಳು ಕೇವಲ 70 ಆಟಗಾರರನ್ನಷ್ಟೇ ಖರೀದಿಸಬಹುದು.

ಐಪಿಎಲ್ ಆಕ್ಷನ್: ಈ ಭಾರಿ ಹರಾಜು ನಡೆಸಿಕೊಡಲ್ಲ ರಿಚರ್ಡ್!

ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡ ಹೀಗಿದೆ ನೋಡಿ...