ಪರ್ತ್(ಡಿ.17): ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಗೆಲುವಿಗೆ 287 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದೆ. ಗುರಿ ಬೆನ್ನಟ್ಟುವ ಭರದಲ್ಲಿ ಭಾರತ 4 ವಿಕೆಟ್ ಕಳೆದುಕೊಂಡಿದ್ದು, ಒತ್ತಡಕ್ಕೆ ಸಿಲುಕಿದೆ.

ನಾಲ್ಕನೇ ದಿನದಾಟದಲ್ಲಿ ಮೊಹಮ್ಮದ್ ಶಮಿ ದಾಳಿಗೆ ಸಿಲಿಕಿದ ಆಸಿಸ್   243 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ  ಭಾರತಕ್ಕೆ 287 ರನ್ ಗುರಿ ನೀಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ವಿಕೆಟ್ ಇಲ್ಲದೆ ನಿರಾಸೆ ಅನುಭವಿಸಿದ ಶಮಿ, 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದರು. 

ಇದನ್ನೂ ಓದಿ: ಸಾಕ್ಷಿ ಶೂ ಲೇಸ್ ಕಟ್ಟಿದ ಧೋನಿ..!

ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಎಂದಿನಂತೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕೆಎಲ್ ರಾಹುಲ್ ಶೂನ್ಯ ಸುತ್ತಿದರೆ, ಭರವಸೆ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಕೇವಲ 4 ರನ್‌ಗೆ ಔಟಾದರು. 13 ರನ್‌ಗಳಿಸುವಷ್ಟರಲ್ಲೇ ಭಾರತ 2 ವಿಕೆಟ್ ಕಳೆದುಕೊಂಡಿತು.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಸೈನಾ ನೆಹ್ವಾಲ್-ಪರುಪಳ್ಳಿ ಕಶ್ಯಪ್ ಅದ್ಧೂರಿ ಆರತಕ್ಷತೆ!

ನಾಯಕ ವಿರಾಟ್ ಕೊಹ್ಲಿ 17 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಆದರೆ ಕೊಹ್ಲಿ ಔಟ್ ತೀರ್ಪು ವಿವಾದಕ್ಕೆ ಕಾರಣವಾಯಿತು. ಇನ್ನು 67 ಎಸೆತ ಎದುರಿಸಿ ಡಿಫೆನ್ಸ್‌ಗೆ ಹೆಚ್ಚು ಒತ್ತು ನೀಡಿದ  ಮುರಳಿ ವಿಜಯ್  20 ರನ್‌ ದಾಟಲಿಲ್ಲ. 55 ರನ್‌ಗೆ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.

ಇದನ್ನೂ ಓದಿ: ಐಪಿಎಲ್ 2019: ಹರಾಜಿಗೂ ಮುನ್ನ ಆರ್‌ಸಿಬಿ ತಂಡ ಹೀಗಿದೆ!

ಅಜಿಂಕ್ಯ ರಹಾನೆ ಹಾಗೂ ಹನುಮಾ ವಿಹಾರಿ ಹೋರಾಟ ನಡೆಸುತ್ತಿದ್ದಾರೆ. ಇದೀಗ ರಹಾನೆ ಹಾಗೂ ವಿಹಾರಿ ಮೇಲೆ ಪರ್ತ್ ಟೆಸ್ಟ್ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ. ಸದ್ಯ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 98 ರನ್ ಸಿಡಿಸಿದೆ.