ಪತ್ನಿ ಸಾಕ್ಷಿಗೆ ಪಾದರಕ್ಷೆ ಖರೀದಿಗೆಂದು ಮಳಿಗೆಯೊಂದಕ್ಕೆ ಧೋನಿ ತೆರಳಿದ್ದರು. ಈ ವೇಳೆ ಸಾಕ್ಷಿಗೆ ಪಾದರಕ್ಷೆಯ ಲೇಸ್ ಕಟ್ಟುತ್ತಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.

ನವದೆಹಲಿ[ಡಿ.17]: ಸದ್ಯ ಕ್ರಿಕೆಟ್‌ನಿಂದ ವಿಶ್ರಾಂತಿಯಲ್ಲಿರುವ ದಿನಗಳನ್ನು ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಸಂತಸದ ಕ್ಷಣಗಳಿಂದ ಕಳೆಯುತ್ತಿದ್ದಾರೆ.

ಹೌದು ಪತ್ನಿ ಸಾಕ್ಷಿಗೆ ಪಾದರಕ್ಷೆ ಖರೀದಿಗೆಂದು ಮಳಿಗೆಯೊಂದಕ್ಕೆ ಧೋನಿ ತೆರಳಿದ್ದರು. ಈ ವೇಳೆ ಸಾಕ್ಷಿಗೆ ಪಾದರಕ್ಷೆಯ ಲೇಸ್ ಕಟ್ಟುತ್ತಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ‘ಪಾದರಕ್ಷೆಗಳಿಗೆ ದುಡ್ಡು ಕೊಟ್ಟಿದ್ದೀರಿ. ಈಗ ಪಾದರಕ್ಷೆಗಳನ್ನು ನೀವೇ ತೊಡಿಸಿ’ ಎಂದು ಸಾಕ್ಷಿ, ಧೋನಿಗೆ ಹೇಳಿದ್ದಾರೆ.

View post on Instagram

ಧೋನಿ ಪಾದರಕ್ಷೆಯ ಲೇಸ್ ಕಟ್ಟುವಾಗ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಸಾಕ್ಷಿ ಫೋಟೋ ಮತ್ತು ವಿಡಿಯೋವನ್ನು ಇನ್‌ಸ್ಟಗ್ರಾಮ್‌ನಲ್ಲಿ ಅಪ್ ಲೋಡ್ ಮಾಡಿದ್ದಾರೆ.