ಆಡಿಲೆಡ್(ಜ.14): ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ ಏಕದಿನ ಸರಣಿ ಆರಂಭದಲ್ಲಿ ಮುಗ್ಗರಿಸಿದೆ. ಮೊದಲ ಪಂದ್ಯದಲ್ಲಿ 34 ರನ್ ಸೋಲು ಅನುಭವಿಸಿದ ಭಾರತ, ಇದೀಗ 2ನೇ ಪಂದ್ಯದ ಗೆಲುವನ್ನ ಎದುರುನೋಡುತ್ತಿದೆ. ನಾಳೆ(ಜ.15)ಆಡಿಲೆಡ್‌ನಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.

ಶಿಖರ್ ಧವನ್, ವಿರಾಟ್ ಕೊಹ್ಲಿ, ಅಂಬಾಟಿ ರಾಯುಡು ಮೊದಲ ಪಂದ್ಯದಲ್ಲಿ ಬಹುಬೇಗನೆ ಪೆವಿಲಿಯನ್ ಸೇರಿಕೊಂಡ ಟೀಂ ಇಂಡಿಯಾವನ್ನ ಸಂಕಷ್ಟಕ್ಕೆ ಸಿಲುಕಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿಎಂ.ಎಸ್.ಧೋನಿಯ ನಿಧಾನಗತಿಯ ಬ್ಯಾಟಿಂಗ್ ಟೀಕೆಗೆ ಗುರಿಯಾಗಿದ್ದರೆ, ದಿನೇಶ್ ಕಾರ್ತಿಕ್ ತಂಡಕ್ಕೆ ನೆರವಾಗಲೇ ಇಲ್ಲ. ಹೀಗಾಗಿ ಮಧ್ಯಮಕ್ರಮಾಂಕದಲ್ಲಿ ಬದಲಾವಣೆ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ: ಪಾಂಡ್ಯ,ರಾಹುಲ್‌ಗಿಂತ ದೊಡ್ಡ ತಪ್ಪು ಮಾಡಿದವ್ರು ಇನ್ನೂ ತಂಡದಲ್ಲಿದ್ದಾರೆ:ಶ್ರೀಶಾಂತ್!

ಮೊದಲ ಪಂದ್ಯದಲ್ಲಿ ಹೋರಾಟ ನಡೆಸಿದ ರೋಹಿತ್ ಶರ್ಮಾ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಈ ಮೂಲಕ ಭರ್ಜರಿ ಫಾರ್ಮ್‌ನಲ್ಲಿರುವ ರೋಹಿತ್, ದ್ವಿತೀಯ ಪಂದ್ಯದಲ್ಲೂ ಅಬ್ಬರಿಸೋ ವಿಶ್ವಾಸದಲ್ಲಿದ್ದಾರೆ. ದ್ವಿತೀಯ ಏಕದಿನ ಟೀಂ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ. ಹೀಗಾಗಿ ಒಂದು ಸಣ್ಣ ತಪ್ಪು ಕೂಡ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಇದನ್ನೂ ಓದಿ: ಐಪಿಎಲ್‌ಗಾಗಿ 16 ವರ್ಷಗಳ ಬಳಿಕ ಆಯೋಜನೆಗೊಂಡ ಸರಣಿ ರದ್ದು?

ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅಮಾನತಿನಿಂದ ತಂಡದ ಮಧ್ಯಮ ಕ್ರಮಾಂಕ ಸಡಿಲಗೊಂಡಿದೆ. ಇದೀಗ  ಇವರಿಬ್ಬರ ಸ್ಥಾನಕ್ಕೆ ಶುಭಮಾನ್ ಗಿಲ್ ಹಾಗೂ ವಿಜಯ್ ಶಂಕರ್ ಆಯ್ಕೆಯಾಗಿದ್ದಾರೆ. ಆದರೆ ವಿಜಯ್ ಶಂಕರ್ ಟೀಂ ಇಂಡಿಯಾ ಸೇರಿಕೊಂಡಿದ್ದ ಪ್ಲೇಯಿಂಗ್ ಇಲೆವೆನ್ ಆಯ್ಕೆಗೆ ಲಭ್ಯರಿದ್ದಾರೆ. ತಂಡದಲ್ಲಿ ಯಾವುದೇ ಇಂಜುರಿ ಸಮಸ್ಯೆ ವರದಿಯಾಗಿಲ್ಲ. ಹೀಗಾಗಿ ಎಲ್ಲರೂ ಫಿಟ್ ಆಗಿರೋದು ಟೀಂ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ 33ರ ಸಂಕಷ್ಟ -ವಿಶ್ವಕಪ್ ಗೆಲುವು ಕಷ್ಟ ಕಷ್ಟ !

ಮೊದಲ ಪಂದ್ಯದ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಆಸ್ಟ್ರೇಲಿಯಾ ಅದೇ ಪ್ರದರ್ಶನ ಮುಂದುವರಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಆಡಿಲೆಡ್ ಪಂದ್ಯ ಗೆದ್ದು ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಆ್ಯರೋನ್ ಫಿಂಚ್ ಪಡೆ ಅಭ್ಯಾಸ ನಡೆಸಿದೆ. ಹೀಗಾಗಿ ದ್ವಿತೀಯ ಏಕದಿನ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.