ದೆಹಲಿ(ಮಾ.11): ಆಸ್ಟ್ರೇಲಿಯಾ ವಿರುದ್ದದ 5ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ತಯಾರಿ ಆರಂಭಿಸಿದೆ. ಮೊಹಾಲಿ ಪಂದ್ಯ ಮುಗಿಸಿದ ಟೀಂ ಇಂಡಿಯಾ 5ನೇ ಪಂದ್ಯಕ್ಕಾಗಿ ದೆಹಲಿ ತಲುಪಿದೆ. ತವರಿಗೆ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ ಮನೆಗೆ ತೆರಳಿ ನಾಯಿ ಜೊತೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ರಿಷಭ್ ಪಂತ್ ಮಾಡಿದ ಎಡವಟ್ಟುಗಳು ಒಂದಾ.. ಎರಡಾ..?

ದೆಹಲಿ ತಲುಪಿದ ಬಳಿಕ ವಿರಾಟ್ ಕೊಹ್ಲಿ ಮನೆಗೆ ತೆರಳಿದ್ದಾರೆ. ಮನೆಯಲ್ಲಿರುವ ತಮ್ಮ ಮುದ್ದಿನ ನಾಯಿ ಜೊತೆ ಸಮಯ ಕಳೆದಿದ್ದಾರೆ. ಟ್ವಿಟರ್‌ನಲ್ಲಿ ಕೊಹ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಮಾರ್ಚ್ 13 ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅಂತಿಮ ಏಕದಿನ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಮೊಹಾಲಿ ಗೆಲುವಿನ ಬೆನ್ನಲ್ಲೇ ಆಸಿಸ್’ಗೆ ಆಘಾತ: ಸ್ಟಾರ್ ಆಟಗಾರ ಔಟ್..?

ಆಸಿಸ್ ವಿರುದ್ಧದ ಸರಣಿಯಲ್ಲಿ ಆರಂಭಿಕ 2 ಪಂದ್ಯ ಗೆದ್ದು ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ, ನಂತರದ 2 ಪಂದ್ಯದಲ್ಲಿ ಸೋಲು ಅನುಭವಿಸಿತು. ಹೀಗಾಗಿ ಸರಣಿ 2-2 ಅಂತರದಲ್ಲಿ ಸಮಬಲವಾಗಿದೆ. ಇದೀಗ ಅಂತಿಮ ಪಂದ್ಯದ ಫಲಿತಾಂಶ ಸರಣಿ ಯಾರಿಗೆ ಅನ್ನೋದನ್ನ ನಿರ್ಧರಿಸಲಿದೆ.