Asianet Suvarna News Asianet Suvarna News

ರಿಷಭ್ ಪಂತ್ ಮಾಡಿದ ಎಡವಟ್ಟುಗಳು ಒಂದಾ.. ಎರಡಾ..?

ಮೊಹಾಲಿ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಪಂತ್, ಬ್ಯಾಟಿಂಗ್’ನಲ್ಲಿ 24 ಎಸೆತಗಳಲ್ಲಿ 36 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಆದರೆ ವಿಕೆಟ್’ಕೀಪಿಂಗ್’ನಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ನಿರಾಸೆ ಮೂಡಿಸಿದರು. 

Frustrated crowd chants MS Dhoni name after Rishabh Pant mistakes
Author
Mohali, First Published Mar 11, 2019, 2:47 PM IST

ಮೊಹಾಲಿ[ಮಾ.11] ಟೀಂ ಇಂಡಿಯಾಗೆ ಧೋನಿ ಅವರಂತಹ ಮ್ಯಾಚ್ ಫಿನೀಷರ್ ಸಿಗಬಹುದು ಆದರೆ ಧೋನಿಯಂತವ ವಿಕೆಟ್ ಕೀಪರ್ ಸಿಗುವುದು ತೀರಾ ಅಪರೂಪ ಎನ್ನುವುದು ಮತ್ತೊಮ್ಮೆ ಮೊಹಾಲಿ ಏಕದಿನ ಪಂದ್ಯದಲ್ಲಿ ಸಾಬೀತಾಗಿದೆ.

ಮ್ಯಾಚ್ ಟರ್ನ್ ಮಾಡಿದ ಟರ್ನರ್; ಸರಣಿ ಸಮಬಲ ಮಾಡಿಕೊಂಡ ಆಸಿಸ್

ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬರೋಬ್ಬರಿ 358 ರನ್ ಕಲೆಹಾಕುವ ಮೂಲಕ ಪ್ರವಾಸಿ ಆಸಿಸ್ ಪಡೆಗೆ ಕಠಿಣ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತದ ಹೊರತಾಗಿಯೂ ಭರ್ಜರಿ ಜಯಭೇರಿ ಬಾರಿಸಿ ಸರಣಿ ಸಮಬಲ ಮಾಡಿಕೊಂಡಿತು. ಈ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಪಂತ್, ಬ್ಯಾಟಿಂಗ್’ನಲ್ಲಿ 24 ಎಸೆತಗಳಲ್ಲಿ 36 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಆದರೆ ವಿಕೆಟ್’ಕೀಪಿಂಗ್’ನಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ನಿರಾಸೆ ಮೂಡಿಸಿದರು. 

ಹೌದು, ಪಂದ್ಯದ ಗತಿಯನ್ನೇ ಬದಲಿಸಿದ ಆಸ್ಟನ್ ಟರ್ನರ್ ಸ್ಟಂಪಿಂಗ್ ಮಾಡುವ ಅವಕಾಶವನ್ನು ಪಂತ್ ಕೈಚೆಲ್ಲಿದ್ದು ಭಾರತದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. 44 ನೇ ಓವರ್’ನಲ್ಲಿ ಚಹಲ್ ಬೌಲಿಂಗ್’ನಲ್ಲಿ ಸುಲಭ ಸ್ಟಂಪಿಂಗ್ ಮಾಡಲು ಪಂತ್ ವಿಫಲವಾದರು. ಈ ವೇಳೆ ಮೈದಾನದಲ್ಲಿದ್ದ ಪ್ರೇಕ್ಷಕರು ಧೋನಿ.. ಧೋನಿ ಎಂದು ಕೂಗಿದ ಘಟನೆಯೂ ನಡೆಯಿತು.  ಅದೇ ರೀತಿ ಕೆಲವು ಕ್ಯಾಚ್ ಹಾಗೂ ರನೌಟ್ ಅವಕಾಶವನ್ನು ಪಂತ್ ಕೈಚೆಲ್ಲಿದರು. ಇನ್ನು ಟರ್ನರ್ 41 ರನ್ ಬಾರಿಸಿದ್ದಾಗ ಪಂತ್ ಸಲಹೆ ನೀಡಿದ ಡಿಆರ್’ಎಸ್ ಮನವಿಯೂ ವಿಫಲವಾಯಿತು. ಆ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಟರ್ನರ್ 43 ಎಸೆತಗಳಲ್ಲಿ 84 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಹೀಗಿತ್ತು ನೋಡಿ ಪಂತ್ ಮಾಡಿಡ ಎಡವಟ್ಟು:

5 ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಆತಿಥೇಯ ಟೀಂ ಇಂಡಿಯಾ ಜಯಿಸಿದರೆ, ಆ ಬಳಿಕ ರಾಂಚಿ ಹಾಗೂ ಮೊಹಾಲಿಯಲ್ಲಿ ನಡೆದ 2 ಪಂದ್ಯಗಳನ್ನು ಆಸ್ಟ್ರೇಲಿಯಾ ಜಯಿಸಿತ್ತು. ಇದೀಗ ಕೊನೆಯ ಹಾಗೂ ನಿರ್ಣಾಯಕ ಪಂದ್ಯ ಮಾರ್ಚ್ 13ರಂದು ನಡೆಯಲಿದ್ದು, ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ಆತಿಥ್ಯ ವಹಿಸಲಿದೆ. 
  

Follow Us:
Download App:
  • android
  • ios