ಆಸ್ಟ್ರೇಲಿಯಾ ವಿರುದ್ಧದ ಮೊಹಾಲಿ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ. ಈಗಾಗಲೇ ಧೋನಿ ಬದಲು ರಿಷಭ್ ಪಂತ್ ತಂಡ ಸೇರಿಕೊಂಡಿದ್ದರೆ, ಉಳಿದ ಯಾವೆಲ್ಲಾ ಕ್ರಿಕೆಟಿಗರು ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿದೆ ವಿವರ.
ಮೊಹಾಲಿ(ಮಾ.09): ಆಸ್ಟ್ರೇಲಿಯಾ ವಿರುದ್ದದ 3ನೇ ಏಕದಿನ ಪಂದ್ಯದ ಸೋಲಿನ ಬಳಿಕ ಇದೀಗ ಟೀಂ ಇಂಡಿಯಾ ಚಿತ್ತ ಮೊಹಾಲಿಯತ್ತ ನೆಟ್ಟಿದೆ. 4ನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಳ್ಳಲು ಕೊಹ್ಲಿ ಬಾಯ್ಸ್ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತ ಆಸ್ಟ್ರೇಲಿಯಾ ಸರಣಿ ಉಳಿಸಲು ಎಲ್ಲಾ ಪ್ರಯತ್ನ ಮಾಡಲಿದೆ. ಮಾ.10 ರಂದು ನಡೆಯಲಿರುವ 4ನೇ ಪಂದ್ಯ ಇದೀಗ ಕುತೂಹಲಗಳ ಆಗರವಾಗಿದೆ.
ಇದನ್ನೂ ಓದಿ: ಧೋನಿ ಮಾಸ್ಟರ್ ಕ್ಲಾಸ್ ರನೌಟ್‌ಗೆ ಟ್ವಿಟರಿಗರ ಮೆಚ್ಚುಗೆ!
ಸೂಪರ್ ಸಂಡೆ ಹೋರಾಟಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡಲು ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಅಂತಿಮ 2 ಏಕದಿನ ಪಂದ್ಯದಿಂದ ಎಂ.ಎಸ್.ಧೋನಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಧೋನಿ ಸ್ಥಾನದಲ್ಲಿ ಪಂತ್ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಸಾನಿಯಾ ಮಿರ್ಜಾ ತಂಗಿ ಜೊತೆ ಅಜರುದ್ದೀನ್ ಮಗನ ಮದುವೆ?
ಇದನ್ನು ಹೊರತು ಪಡಿಸಿದರೆ ಕಳಪೆ ಫಾರ್ಮ್‌ನಲ್ಲಿರುವ ಶಿಖರ್ ಧವನ್ ಬದಲು ಕೆ.ಎಲ್.ರಾಹುಲ್‌ಗೆ ಸ್ಥಾನ ನೀಡೋ ಸಾಧ್ಯತೆ ಇದೆ. ಮತ್ತೊರ್ವ ಕ್ರಿಕೆಟಿಗ ಅಂಬಾಟಿ ರಾಯುಡು ವೈಫಲ್ಯ ತಂಡದ ತಲೆನೋವು ಹೆಚ್ಚಿಸಿದೆ. ಮೊಹಾಲಿ ಪಂದ್ಯದಲ್ಲಿ ಅಂಬಾಟಿಗೆ ಮತ್ತೊಂದು ಅವಕಾಶ ನೀಡೋ ಸಾಧ್ಯತೆ ಇದೆ.
ಇದನ್ನೂ ಓದಿ: ಕಾಫಿ ವಿತ್ ಕರಣ್ ಶೋಗೆ ಹೋಗ್ತೀರಾ? ಅಭಿಮಾನಿ ಪ್ರಶ್ನೆಗೆ ಅಶ್ವಿನ್ ಉತ್ತರ!
ವೇಗಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಿ, ಭುವನೇಶ್ವರ್ ಕುಮಾರ್‌ಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಇನ್ನು ರವೀಂದ್ರ ಜಡೇಜಾ ಬದಲು ಯಜುವೇಂದ್ರ ಚಹಾಲ್ ಕಣಕ್ಕಿಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ವಿಶ್ವಕಪ್ ದೃಷ್ಟಿಯಿಂದ ತಂಡದಲ್ಲಿ ಬದಲಾವಣೆ ಖಚಿತ. ಇಷ್ಟೇ ಅಲ್ಲ ಸತತ ಕ್ರಿಕೆಟ್‌ನಿಂದ ಬಳಲಿರುವ ಕ್ರಿಕೆಟಿಗರಿಗೆ ವಿಶ್ರಾಂತಿಯ ಅಗತ್ಯವಿದೆ.
ಸಂಭಾವ್ಯ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಕೆ,ಎಲ್.ರಾಹುಲ್, ಅಂಬಾಟಿ ರಾಯುಡು, ವಿಜಯ್ ಶಂಕರ್, ರಿಷಬ್ ಪಂತ್, ಕೇದಾರ್ ಜಾಧವ್, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 9, 2019, 3:32 PM IST