ದೆಹಲಿ(ಮಾ.12): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದೆಹಲಿ ಪಂದ್ಯ ಕುತೂಹಲ ಹೆಚ್ಚಿಸಿದೆ. ಆರಂಭಿಕ 2 ಪಂದ್ಯದಲ್ಲಿ ಕೊಹ್ಲಿ ಸೈನ್ಯ ಗೆಲುವಿನ ನಗೆ ಬೀರಿದ್ದರೆ, 3 ಮತ್ತು 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಬ್ಬರಿಸಿದೆ. ಹೀಗಾಗಿ ಅಂತಿಮ ಪಂದ್ಯ ಸರಣಿ ನಿರ್ಧರಿಸಲಿದೆ. 5ನೇ  ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಲು 3 ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ಇದನ್ನೂ ಓದಿ: ಇಂಡೋ-ಆಸಿಸ್ ಏಕದಿನ: ನಿರ್ಣಾಯಕ ಪಂದ್ಯಕ್ಕೆ ಹೇಗಿರಲಿದೆ ಕೊಹ್ಲಿ ಸೈನ್ಯ?

1  ಫೀಲ್ಡಿಂಗ್
ರಾಂಚಿ ಹಾಗೂ ಮೊಹಾಲಿ ಪಂದ್ಯದಲ್ಲಿ ಟೀಂ ಇಂಡಿಯಾ ಫೀಲ್ಡಿಂಗ್ ಕಳಪೆಯಾಗಿತ್ತು. ಆದರಲ್ಲೂ ಮೊಹಾಲಿ ಪಂದ್ಯದಲ್ಲಿ ಫೀಲ್ಡಿಂಗ್‌ನಲ್ಲಿ ಮಾಡಿದ ತಪ್ಪುಗಳೇ ಸೋಲಿಗೆ ಕಾರಣವಾಯಿತು. ಹೀಗಾಗಿ ಅಂತಿಮ ಪಂದ್ಯದಲ್ಲಿ ಫೀಲ್ಡಿಂಗ್ ಸುಧಾರಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಧೋನಿ ಇಲ್ಲದ ಕೊಹ್ಲಿ ಟೀಂ ಡಮ್ಮಿ: ವಿರಾಟ್ ಒಪ್ಪಿಕೊಂಡ ಸತ್ಯವಿದು..!

2 ಟಾಸ್‌ಗೂ ಮೊದಲೇ ಪಿಚ್ ಅರ್ಥಮಾಡಿಕೊಳ್ಳಬೇಕು
ಕಳೆದೆರಡು ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಟಾಸ್‌ಗೂ ಮೊದಲೇ ಪಿಚ್ ಅರ್ಥಮಾಡಿಕೊಳ್ಳಬೇಕಿದೆ. ಪಿಚ್ ಹಾಗೂ ಕಂಡೀಷನ್‌ಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಬೇಕು.

ಇದನ್ನೂ ಓದಿ: ಮೊಹಾಲಿ ಗೆಲುವಿನ ಬೆನ್ನಲ್ಲೇ ಆಸಿಸ್’ಗೆ ಆಘಾತ: ಸ್ಟಾರ್ ಆಟಗಾರ ಔಟ್..?

3 ಎದುರಾಳಿಯ ಜೊತೆಯಾಟದ ಅವಕಾಶಕ್ಕೆ ಬ್ರೇಕ್
ಮಿಡ್ಲ್ ಓವರ್‌ಗಳಲ್ಲಿ ಎದುರಾಳಿಗಳು ನಿರಾಯಾಸವಾಗಿ ರನ್ ಕಲೆಹಾಕುತ್ತಿದ್ದಾರೆ. ಜೊತೆಗೆ ಅತ್ಯುತ್ತಮ ಜೊತೆಯಾಟ ನೀಡೋ ಮೂಲಕ ಬೃಹತ್ ಮೊತ್ತಕ್ಕೆ ಕಾರಣರಾಗುತ್ತಿದ್ದಾರೆ. ಈ ವೇಳೆ ಬೌಲರ್‌ಗಳ ರೊಟೇಶನ್ ಹಾಗೂ ಎದುರಾಳಿ ಬ್ಯಾಟ್ಸ್‌ಮನ್ ವೀಕ್ನೆಸ್ ಮೇಲೆ ದಾಳಿ ಮಾಡಿ ಜೊತೆಯಾಟಕ್ಕೆ ಬ್ರೇಕ್ ಹಾಕಬೇಕಿದೆ.