ದೆಹಲಿ(ಮಾ.12): ಆಸ್ಟ್ರೇಲಿಯಾ ವಿರುದ್ಧದ 5ನೇ ಹಾಗೂ ಅಂತಿಮ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆರಂಭಿಕ 2 ಪಂದ್ಯ ಗೆದ್ದು ಬೀಗಿದ್ದ ಟೀಂ ಇಂಡಿಯಾ 3 ಮತ್ತು 4ನೇ ಪಂದ್ಯದಲ್ಲಿ ಮುಗ್ಗರಿಸಿತು. ಹೀಗಾಗಿ ಸದ್ಯ ಸರಣಿ 2-2 ಅಂತರದಲ್ಲಿ ಸಮಬಲವಾಗಿದೆ. ಇದೀಗ ಅಂತಿಮ ಪಂದ್ಯದ ಫಲಿತಾಂಶ ಸರಣಿ ಯಾರಿಗೆ ಅನ್ನೋದನ್ನು ನಿರ್ಧರಿಸಲಿದೆ.

ಇದನ್ನೂ ಓದಿ: ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ

ಆಸಿಸ್ ವಿರುದ್ಧದ ತವರಿನಲ್ಲಿ ಟಿ20 ಸರಣಿ ಸೋತಿರುವ ಭಾರತ, ಏಕದಿನದಲ್ಲಿ ತಿರುಗೇಟು ನೀಡೋ ವಿಶ್ವಾಸದಲ್ಲಿದೆ. ಆದರೆ ಕಳೆದೆರಡು ಪಂದ್ಯದ ಸೋಲು ಟೀಂ ಇಂಡಿಯಾದ ಚಿಂತೆ ಹೆಚ್ಚಿಸಿದೆ. ಇದಕ್ಕಾಗಿ ಅಂತಿಮ ಪಂದ್ಯದಲ್ಲಿ ಒಂದು ಬದಲಾವಣೆ ಮಾಡೋ ಸಾಧ್ಯತೆ ಇದೆ. ಯಜುವೇಂದ್ರ ಚೆಹಾಲ್ ಬದಲು ರವೀಂದ್ರ ಜಡೇಜಾ ಮತ್ತೆ ತಂಡ ಸೇರಿಕೊಳ್ಳೋ ಸಾಧ್ಯತೆ ಇದೆ.

ಇದನ್ನೂ ಓದಿ: ಕುಲ್ದೀಪ್ ಭಾರತದ ಶೇನ್ ವಾರ್ನ್ ಎಂದ ಆಸಿಸ್ ಸ್ಟಾರ್ ಕ್ರಿಕೆಟಿಗ..!

ಟೀಂ ಇಂಡಿಯಾ ಸಂಭನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ,ಶಿಖರ್ ಧವನ್,ಕೆಎಲ್ ರಾಹುಲ್, ರಿಷಬ್ ಪಂತ್, ಕೇದಾರ್ ಜಾಧವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್,  ಜಸ್ಪ್ರೀತ್ ಬುಮ್ರಾ